Asianet Suvarna News Asianet Suvarna News

ಏಷ್ಯನ್‌ ಕ್ರೀಡಾಕೂಟದ ಪದಕ ಸಾಧಕರಿಗೆ ಸನ್ಮಾನ, ನಗದು

ಶೂಟರ್‌ ದಿವ್ಯಾ ಟಿ.ಎಸ್‌., ಕ್ರಿಕೆಟರ್‌ ರಾಜೇಶ್ವರಿ ಗಾಯಕ್ವಾಡ್‌, ಬ್ಯಾಡ್ಮಿಂಟನ್‌ ತಾರೆಗಳಾದ ಮಿಥುನ್‌ ಮಂಜುನಾಥ್ ಹಾಗೂ ಸಾಯಿ ಪ್ರತೀಕ್‌ರನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸನ್ಮಾನಿಸಿ, 1 ಲಕ್ಷ ರು. ನಗದು ಬಹುಮಾನ ನೀಡಿದರು.

Karnataka Olympic Association felicitate Asian Games medalists kvn
Author
First Published Dec 27, 2023, 12:03 PM IST

ಬೆಂಗಳೂರು: ಚೀನಾದ ಹ್ಯಾಂಗ್ಝೋನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದು, ಕರ್ನಾಟಕಕ್ಕೆ ಹೆಮ್ಮೆ ತಂಡ ಕ್ರೀಡಾ ಸಾಧಕರನ್ನು ಮಂಗಳವಾರ ರಾಜಭವನದಲ್ಲಿ ಕರ್ನಾಟಕ ಒಲಿಂಪಿಕ್‌ ಸಂಸ್ಥೆ ವತಿಯಿಂದ ಸನ್ಮಾನಿಸಿ, ನಗದು ಬಹುಮಾನ ಹಸ್ತಾಂತರಿಸಲಾಯಿತು.

ಶೂಟರ್‌ ದಿವ್ಯಾ ಟಿ.ಎಸ್‌., ಕ್ರಿಕೆಟರ್‌ ರಾಜೇಶ್ವರಿ ಗಾಯಕ್ವಾಡ್‌, ಬ್ಯಾಡ್ಮಿಂಟನ್‌ ತಾರೆಗಳಾದ ಮಿಥುನ್‌ ಮಂಜುನಾಥ್ ಹಾಗೂ ಸಾಯಿ ಪ್ರತೀಕ್‌ರನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸನ್ಮಾನಿಸಿ, 1 ಲಕ್ಷ ರು. ನಗದು ಬಹುಮಾನ ನೀಡಿದರು. ಆದರೆ ಸನ್ಮಾನ ಸ್ವೀಕರಿಸಬೇಕಿದ್ದ ಟೆನಿಸ್‌ ಪಟು ರೋಹನ್‌ ಬೋಪಣ್ಣ, ಗಾಲ್ಫ್‌ ಆಟಗಾರ್ತಿ ಅದಿತಿ ಅಶೋಕ್‌, ಅಥ್ಲೆಟಿಕ್ಸ್‌ ತಾರೆಗಳಾದ ಮಿಜೊ ಚಾಕೊ ಕುರಿಯನ್‌, ನಿಹಾಲ್‌ ಜೊಯೆಲ್‌ ಸಮಾರಂಭಕ್ಕೆ ಗೈರಾದರು.

ಪಾಕ್‌ಗೆ ಡೇವಿಸ್‌ ಕಪ್‌ ತಂಡ: ಕೇಂದ್ರದ ಸಲಹೆ ಕೇಳಿದ ಎಐಟಿಎ

ಸಾಧಕರಿಗೆ ಒಲಿಂಪಿಕ್‌ ಸಂಸ್ಥೆ ಪ್ರಶಸ್ತಿ ಪ್ರದಾನ

ಬೆಂಗಳೂರು(ಡಿ.27): ಬ್ಯಾಡ್ಮಿಂಟನ್ ತಾರೆ ಮಿಥುನ್ ಮಂಜುನಾಥ್, ಅಥ್ಲೆಟಿಕ್ಸ್‌ ಸಾಧಕಿ ಪ್ರಿಯಾ ಮೋಹನ್ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕರ್ನಾಟಕದ 22 ಮಂದಿಗೆ ಮಂಗಳವಾರ ರಾಜ್ಯ ಒಲಿಂಪಿಕ್ ಸಂಸ್ಥೆ(ಕೆಎಒ)ಯ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಗೃಹ ಸಚಿವ ಜಿ. ಪರಮೇಶ್ವರ್, ಕ್ರೀಡಾ ಸಚಿವ ಬಿ. ನಾಗೇಂದ್ರ, ಕೆಒಎ ಅಧ್ಯಕ್ಷ ಹಾಗೂ ಮಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಾ. ಗೋವಿಂದರಾಜು ಅವರು ಪ್ರಶಸ್ತಿ ಹಸ್ತಾಂತರಿಸಿದರು. ಕ್ರೀಡಾ ಸಾಧಕರಿಗೆ ಪ್ರಶಸ್ತಿ ಜೊತೆ ಒಂದು ಲಕ್ಷ ರುಪಾಯಿ ನಗದು ಬಹುಮಾನವನ್ನೂ ನೀಡಲಾಯಿತು. 

ಖೇಲ್‌ರತ್ನ, ಅರ್ಜುನ ಪ್ರಶಸ್ತಿ ವಾಪಾಸ್‌ ಮಾಡುವ ನಿರ್ಧಾರ ಘೋಷಿಸಿದ ವಿನೇಶ್‌ ಪೋಗಟ್‌!

ಈ ವೇಳೆ ಮಾತನಾಡಿದ ರಾಜ್ಯಪಾಲ ಗೆಹಲೋತ್, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶದ ಕೀರ್ತಿ ಹೆಚ್ಚಿಸುವ ಕ್ರೀಡಾ ತಾರೆಗಳು ಯುವ ಪೀಳಿಗೆಗೆ ಪ್ರೇರಣೆ ಮತ್ತು ಸ್ಪೂರ್ತಿ. ಕರ್ನಾಟಕ ಅತ್ಯಂತ ಶ್ರೀಮಂತ ಕ್ರೀಡಾ ಇತಿಹಾಸ ಮತ್ತು ಸಂಪ್ರದಾಯವನ್ನು ಹೊಂದಿದೆ. ಸರ್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.

ಸಮಾರಂಭದಲ್ಲಿ ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಎನ್, ಆಯುಕ್ತ ಶಶಿಕುಮಾರ್ ಎನ್, ಕೆಒಎ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜು ಉಪಸ್ಥಿತರಿದ್ದರು.

ವಲಸೆ ಹೋಗಬೇಡಿ:

ರಾಜ್ಯದ ಕ್ರೀಡಾ ಸಾಧಕರಿಗೆ ಕೆಲಸ ಸಿಗಲು ಇನ್ನು ಕಷ್ಟಪಡಬೇಕಿಲ್ಲ. ಸರ್ಕಾರದ ಎಲ್ಲಾ ಇಲಾಖೆಯಲ್ಲೂ ಶೇ.2 ಮೀಸಲಾತಿ ಹೆಚ್ಚಿಸುತ್ತೇವೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಕರ್ನಾಟಕದಲ್ಲೇ ಇದ್ದು ಒಲಿಂಪಿಕ್ಸ್‌, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಸಾಧನೆ ಮಾಡಿ. ಎಲ್ಲಿಗೂ ವಲಸೆ ಹೋಗಬೇಡಿ. ನಿಮಗೆ ಬೇಕಾದ ಎಲ್ಲಾ ಸಹಕಾರ ಸರ್ಕಾರ ಮಾಡಲಿದೆ ಎಂದು ಡಾ. ಕೆ ಗೋವಿಂದರಾಜು ಕೆಒಎ ಅಧ್ಯಕ್ಷ.
 

Follow Us:
Download App:
  • android
  • ios