ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಭರ್ಜರಿ ಶತಕ ಸಿಡಿಸಿದ್ರು. ಬಿನ್ನಿ 158 ಬಾಲ್ನಲ್ಲಿ 17 ಬೌಂಡ್ರಿ, 3 ಸಿಕ್ಸ್ ಸಹಿತ 156 ರನ್ ಬಾರಿಸಿದರು.
ಮುಂಬೈನಲ್ಲಿ ನಡೆಯುತ್ತಿರುವ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಅಸ್ಸಾಂ ತಂಡವನ್ನ 325 ರನ್ಗೆ ಆಲೌಟ್ ಮಾಡಿದ್ದ ಕರ್ನಾಟಕ ತಂಡ 570 ರನ್ಗೆ ಆಲೌಟ್ ಆಯ್ತು.ಈ ಮೂಲಕ 245 ರನ್ ಇನ್ನಿಂಗ್ಸ್ ಮುನ್ನಡೆ ಸಾಧಿಸ್ತು. ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಭರ್ಜರಿ ಶತಕ ಸಿಡಿಸಿದ್ರು. ಬಿನ್ನಿ 158 ಬಾಲ್ನಲ್ಲಿ 17 ಬೌಂಡ್ರಿ, 3 ಸಿಕ್ಸ್ ಸಹಿತ 156 ರನ್ ಬಾರಿಸಿದರು. ಸಿಎಂ ಗೌತಮ್ 73 ಹಾಗೂ ಶ್ರೇಯಸ್ ಗೋಪಾಲ್ 35 ರನ್ ಹೊಡೆದ್ರು. ಅಸ್ಸಾಂ ಸೆಕೆಂಡ್ ಇನ್ನಿಂಗ್ಸ್ನಲ್ಲಿ 3ನೇ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿದೆ. ಇನ್ನೂ 197 ರನ್ ಹಿನ್ನಡೆಯಲ್ಲಿರುವ ಅಸ್ಸಾಂ, ಕೊನೆಯ ದಿನ ಡ್ರಾಗಾಗಿ ಹೋರಾಟ ನಡೆಸಲಿದೆ.
