ಬಿನ್ನಿ 72 ರನ್ ಬಾರಿಸಿ ವಿಕೆಟ್ ಒಪ್ಪಿದರೆ, ಕರುಣ್ ನಾಯರ್(134 ರನ್) ಶತಕ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಆದರೆ ಉಳಿದ ಬ್ಯಾಟ್ಸ್'ಮನ್'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ.  

ಶಿವಮೊಗ್ಗ(ಅ.26): ಕರುಣ್ ನಾಯರ್ ಆಕರ್ಷಕ ಶತಕ ಹಾಗೂ ಸ್ಟುವರ್ಟ್ ಬಿನ್ನಿಯ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಕರ್ನಾಟಕ ಎರಡನೇ ಇನಿಂಗ್ಸ್'ನಲ್ಲಿ 332 ರನ್ ಕಲೆಹಾಕಿದ್ದು, 375 ರನ್'ಗಳ ಮುನ್ನಡೆ ಗಳಿಸಿದೆ. ಈ ಮೂಲಕ ಹೈದರಾಬಾದ್ ತಂಡಕ್ಕೆ ಗೆಲ್ಲಲು 376 ರನ್'ಗಳ ಸವಾಲಿನ ಗುರಿ ನೀಡಿದೆ.

ಇಲ್ಲಿನ ಕೆಎಸ್'ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 127 ರನ್'ಗಳಿಗೆ 4 ವಿಕೆಟ್ ಕಳೆದು ಮೂರನೇ ದಿನದಾಟ ಆರಂಭಿಸಿದ ಕರ್ನಾಟಕಕ್ಕೆ ಕರುಣ್ ನಾಯರ್ ಹಾಗೂ ಸ್ಟುವರ್ಟ್ ಬಿನ್ನಿ ಭರ್ಜರಿ ಆರಂಭವೊದಗಿಸಿದರು. ಬಿನ್ನಿ ಹಾಗೂ ನಾಯರ್ ಜೋಡಿ ಶತಕದ ಜತೆಯಾಟವಾಡುವ ಮೂಲಕ ಕರ್ನಾಟಕ ತಂಡಕ್ಕೆ ಭರ್ಜರಿ ಮುನ್ನಡೆ ಒದಗಿಸಿಕೊಟ್ಟರು.

ಬಿನ್ನಿ 72 ರನ್ ಬಾರಿಸಿ ವಿಕೆಟ್ ಒಪ್ಪಿದರೆ, ಕರುಣ್ ನಾಯರ್(134 ರನ್) ಶತಕ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಆದರೆ ಉಳಿದ ಬ್ಯಾಟ್ಸ್'ಮನ್'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ.

ಹೈದರಾಬಾದ್ ಪರ ಮೆಹದಿ ಹಸನ್ 5 ವಿಕೆಟ್ ಪಡೆದು ಸಂಭ್ರಮಿಸಿದರು.

ಈಗಾಗಲೇ ಅಸ್ಸಾಂ ವಿರುದ್ಧ ಜಯಭೇರಿ ಬಾರಿಸಿದ್ದ ವಿನಯ್ ಪಡೆ, ಇದೀಗ ಶಿವಮೊಗ್ಗದಲ್ಲಿ ಎರಡನೇ ಗೆಲುವ ಸಾಧಿಸುವ ವಿಶ್ವಾಸದಲ್ಲಿದೆ.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ ಮೊದಲ ಇನಿಂಗ್ಸ್: 183/10

ಕರ್ನಾಟಕ ಎರಡನೇ ಇನಿಂಗ್ಸ್: 332/10

ಕರುಣ್ ನಾಯರ್: 134

ಸ್ಟುವರ್ಟ್ ಬಿನ್ನಿ: 72

ಹೈದರಾಬಾದ್ ಮೊದಲ ಇನಿಂಗ್ಸ್: 136/10