94ನೇ ಓವರ್'ನಲ್ಲಿ ಪುನಃ ದಾಳಿಗಿಳಿದ ಶ್ರೈಯಸ್, ಮಹೇಶ್ ರಾವತ್ ಅವರನ್ನು ಎಲ್'ಬಿ ಬಲೆಗೆ ಕೆಡಿವಿದರು. ಕೊನೆಯ ಇಬ್ಬರು ಆಟಗಾರಲ್ಲಿ ಒಬ್ಬರು ಗೌತಮ್'ಗೆ ಬಲಿಯಾದರೆ ಮತ್ತೊಬ್ಬರು ಶ್ರೇಯಸ್'ಗೆ ಔಟಾದರು.

ನವದೆಹಲಿ(.27): ಇನ್ನಿಂಗ್ಸ್ ಮುನ್ನಡೆಯ ನಿರೀಕ್ಷೆಯಲ್ಲಿದ್ದ ರೈಲ್ವೆಸ್ ಆಟಗಾರರು ರಣಜಿ ಲೀಗ್ ಪಂದ್ಯದ ಕೊನೆಯ ಪಂದ್ಯದಲ್ಲಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ದಾಳಿಗೆ 333 ರನ್'ಗಳಿಗೆ ಆಲ್'ಔಟ್ ಆದರು. ಇದರೊಂದಿಗೆ ವಿನಯ್ ಕುಮಾರ್ ಪಡೆ 101 ರನ್ ಮುನ್ನಡೆ ಪಡೆದಿದೆ.

241/4 ರನ್ ಗಳಿಸಿ ಮೂರನೆ ದಿನದಾಟ ಆರಂಭಿಸಿದ ರೈಲ್ವೇಸ್ ಆಟಗಾರರು ಭೋಜನದ ವೇಳೆಗೆ ಆಲ್ ಔಟ್ ಆದರು. 79ನೇ ಓವರ್'ನಲ್ಲಿ 91 ರನ್ ಗಳಿಸಿದ್ದ ಅರಿಂದಮ್ ಘೋಷ್ ಶ್ರೇಯಸ್ ಬೌಲಿಂಗ್'ನಲ್ಲಿ ಬೌಲ್ಡ್ ಆದರು. ಕ್ರೀಸ್'ಗಿಳಿದ ಮನೀಶ್ ರಾವ್ ಅದೇ ಓವರ್'ನ ನಂತರದ ಬೌಲಿಂಗ್'ನಲ್ಲಿ ಎಲ್'ಬಿ ಬಲೆಗೆ ಬಿದ್ದರು. ವಿದ್ಯಾಧರ್ ಕಾಮತ್ ಜೊತೆ ಮಹೇಶ್ ರಾವತ್ ಒಂದಷ್ಟು ಹೊತ್ತು ಆಟವಾಡಿ ಶತಕ ಪೂರೈಸಿದರು.

94ನೇ ಓವರ್'ನಲ್ಲಿ ಪುನಃ ದಾಳಿಗಿಳಿದ ಶ್ರೈಯಸ್, ಮಹೇಶ್ ರಾವತ್ ಅವರನ್ನು ಎಲ್'ಬಿ ಬಲೆಗೆ ಕೆಡಿವಿದರು. ಕೊನೆಯ ಇಬ್ಬರು ಆಟಗಾರಲ್ಲಿ ಒಬ್ಬರು ಗೌತಮ್'ಗೆ ಬಲಿಯಾದರೆ ಮತ್ತೊಬ್ಬರು ಶ್ರೇಯಸ್'ಗೆ ಔಟಾದರು.

ಶ್ರೇಯಸ್'ಗೆ 4 ವಿಕೇಟ್

2ನೇ ದಿನ ಒಂದೂ ವಿಕೇಟ್ ಪಡೆಯದ ಶ್ರೇಯಸ್ ಗೋಪಾಲ್ ಮೂರನೆ ದಿನ 102/4 ವಿಕೇಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಇನ್ನುಳಿದಂತೆ ಕೆ. ಗೌತಮ್ ಹಾಗೂ ಮಿಥುನ್ ತಲಾ 2 ವಿಕೇಟ್ ಕಿತ್ತರು.

ಸ್ಕೋರ್

ರೈಲ್ವೇಸ್ ಮೊದಲ ಇನ್ನಿಂಗ್ಸ್ 333/10(98.4)

(ಮಹೇಶ್ ರಾವತ್ 124, ಎ. ಘೋಷ್ 91, ಶ್ರೇಯಸ್ ಗೋಪಾಲ್ 102/4 )

ಕರ್ನಾಟಕ ಮೊದಲ ಇನ್ನಿಂಗ್ಸ್ 434

(ವಿವರ ಅಪೂರ್ಣ)