ನವದೆಹಲಿ(ಜು.26): ಕಾರ್ಗಿಲ್ ವಿಜಯೋತ್ಸವಕ್ಕೆ ಇದೀಗ 20ನೇ ವರ್ಷದ  ಸಂಭ್ರಮ.  1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ, ಟೈಗರ್ ಹಿಲ್‌ ಪರ್ವತದ ಮೇಲೆ ತ್ರಿವರ್ಣ ಧ್ವಜ ಹಾರಾಡಿಸಿದ ದಿನ. ಜುಲೈ 26 ರಂದು ಕಾರ್ಗಿಲ್ ಹೋರಾಟ ಅಂತ್ಯಗೊಂಡಿತ್ತು. ಈ ದಿನವನ್ನು ಪ್ರತಿ ವರ್ಷ ಭಾರತ ಕಾರ್ಗಿಲ್ ವಿಜಯ್ ದಿವಸ್ ಆಗಿ ಆಚರಿಸುತ್ತಿದೆ. ಭಾರತೀಯ ಸೈನಿಕರ ಕೆಚ್ಚೆದೆಯ ಹೋರಾಟ, ತ್ಯಾಗ, ಬಲಿದಾನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ. ಇದೀಗ 20ನೇ ವರ್ಷದ ಸಂಭ್ರಮಾಚರಣೆ ದಿನ, ಟೀಂ ಇಂಡಿಯಾ ಕ್ರಿಕೆಟಿಗರು ಭಾರತೀಯರ ಪರಾಕ್ರಮಕ್ಕೆ ಸಲ್ಯೂಟ್ ಅರ್ಪಿಸಿದ್ದಾರೆ.