ಡಬಲ್ಸ್‌ ಆಟಗಾರ್ತಿಯಾಗಿದ್ದ ಜ್ವಾಲಾ ಮತ್ತು ಅಶ್ವಿನಿ ಜೋಡಿ ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ಕಂಚು ಮತ್ತು 2010ರ ಕಾಮನ್‌'ವೆಲ್ತ್‌ ಕೂಟದಲ್ಲಿ ಚಿನ್ನದ ಪದಕ ಜಯಿಸಿತ್ತು.

ಹೈದರಾಬಾದ್‌(ಮೇ.26): ಮುಂದಿನ ತಿಂಗಳು ನಡೆಯಲಿರುವ ಆಸ್ಪ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಸೂಪರ್‌ ಸಿರೀಸ್‌ ಟೂರ್ನಿಗಾಗಿ ಜ್ವಾಲಾ ಗುಟ್ಟಾ ಭಾರತ ತರಬೇತುದಾರರ ತಂಡ­ವನ್ನು ಸೇರಲಿದ್ದಾರೆ.

ಇತ್ತೀಚೇಗಷ್ಟೇ ಜ್ವಾಲಾ ವೃತ್ತಿಪರ ಆಟದಿಂದ ದೂರ ಸರಿದು, ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ ಆಡಳಿತ ಮಂಡಳಿಗೆ ಸೇರ್ಪಡೆಗೊಂಡಿದ್ದರು. ಇದೀಗ ತಂಡದ ಕೋಚ್‌ ಬಳಗವನ್ನು ಸೇರಿರುವುದು ಅಚ್ಚರಿ ಮೂಡಿಸಿದೆ.

ಡಬಲ್ಸ್‌ ಆಟಗಾರ್ತಿಯಾಗಿದ್ದ ಜ್ವಾಲಾ ಮತ್ತು ಅಶ್ವಿನಿ ಜೋಡಿ ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ಕಂಚು ಮತ್ತು 2010ರ ಕಾಮನ್‌'ವೆಲ್ತ್‌ ಕೂಟದಲ್ಲಿ ಚಿನ್ನದ ಪದಕ ಜಯಿಸಿತ್ತು.