Asianet Suvarna News Asianet Suvarna News

ಫಿಫಾ ಆಡಳಿತ ಸಮಿತಿ ಮುಖ್ಯಸ್ಥರಾಗಿ ನ್ಯಾ. ಮುದ್ಗಲ್

ನ್ಯಾಯಮೂರ್ತಿ ಮುಕುಲ್ ಮುದ್ಗಲ್ 2009ರಿಂದ 2011ರ ಅವಧಿಯಲ್ಲಿ ಪಂಜಾಬ್ ಹಾಗೂ ಹರ್ಯಾಣ ಉಚ್ಚನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ

Justice Mukul Mudgal to head FIFA Governance Committee
  • Facebook
  • Twitter
  • Whatsapp

ನವದೆಹಲಿ(ಮೇ.12): ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಅವರನ್ನು ಫಿಫಾ ಆಡಳಿತ ಸಮಿತಿಯ ಮುಖ್ಯಸ್ಥರಾಗಿ ನೇಮಿಸಲಾಗಿದೆ.

ಮನಾಮಾದ ಬಹರೈನ್‌ ನಗರದಲ್ಲಿ ನಡೆದ ವಿಶ್ವ ಫುಟ್ಬಾಲ್‌ ಆಡಳಿತ ಸಮಿತಿಯ 67ನೇ ಕಾಂಗ್ರೆಸ್‌ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಪೋರ್ಚುಗಲ್‌'ನ ಮಿಗ್ಯೂಲ್‌ ಮಡುರೊ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಫಿಫಾ ಕೌನ್ಸಿಲ್‌ ಬುಧವಾರವಷ್ಟೇ ಮುದ್ಗಲ್‌ ಅವರ ಹೆಸರನ್ನು ಸೂಚಿಸಿತ್ತು.

ಕಳೆದ ವರ್ಷ ಮೆಕ್ಸಿಕೊದಲ್ಲಿ ನಡೆದಿದ್ದ ಸಭೆಯಲ್ಲಿ ಮುದ್ಗಲ್‌ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

Follow Us:
Download App:
  • android
  • ios