ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 211 ರನ್'ಗಳಿಂದ ಸೋತ ನಂತರ ಡುಮಿನಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಜೋಹಾನ್ಸ್'ಬರ್ಗ್(ಸೆ.16): ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಆಲ್'ರೌಂಡರ್ ಜೆ.ಪಿ. ಡುಮಿನಿ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ.
ಏಕದಿನ ಹಾಗೂ ಟಿ20ಯಲ್ಲಿ ಹೆಚ್ಚು ಗಮನ ಹರಿಸುವ ಕಾರಣದಿಂದ 33 ವರ್ಷದ ಆಟಗಾರ ಟೆಸ್ಟ್'ಗೆ ವಿದಾಯ ಘೋಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 211 ರನ್'ಗಳಿಂದ ಸೋತ ನಂತರ ಡುಮಿನಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಕಳೆದ 16 ವರ್ಷಗಳಲ್ಲಿ ಒಟ್ಟು 46 ಟೆಸ್ಟ್'ಗಳನ್ನು ಆಡಿರುವ ಡುಮಿನಿ 6 ಶತಕ, 8 ಅರ್ಧ ಶತಕಗಳೊಂದಿಗೆ 2103 ರನ್ ಬಾರಿಸಿದ್ದಾರೆ.
