ಭಾರತೀಯ ಪಿಚ್‌ಗಳಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಪ್ರಯಾಸಪಡಲಿದ್ದಾರೆ ಎಂದು ರೋಡ್ಸ್ ತಿಳಿಸಿದರು.

ನವದೆಹಲಿ(ನ.04): ಇದೇ ನವೆಂಬರ್ 9 ರಿಂದ ಆರಂಭವಾಗುವ ಭಾರತ ವಿರುದ್ಧದ ಟೆಸ್ಟ್ ಸರಣಿ ಇಂಗ್ಲೆಂಡ್‌ಗೆ ಹೆಚ್ಚು ಕಷ್ಟದಾಯಕವಾಗಲಿದೆ ಎಂದು ದ.ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ಪಿಚ್‌ಗಳಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಪ್ರಯಾಸಪಡಲಿದ್ದಾರೆ ಎಂದು ರೋಡ್ಸ್ ತಿಳಿಸಿದರು. ಭಾರತ ಪ್ರವಾಸ ಕೈಗೊಳ್ಳುತ್ತಿರುವ ಇಂಗ್ಲೆಂಡ್ 5 ಟೆಸ್ಟ್ 3 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ. ಭಾರತದ ಪಿಚ್‌ಗಳಲ್ಲಿ ಆಡಲು ಇಂಗ್ಲೆಂಡ್ ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಇಲ್ಲಿ ಪ್ರವಾಸಿ ಆಟಗಾರರಿಗೆ ಹೆಚ್ಚಿನ ಒತ್ತಡ ಇರಲಿದೆ ಎಂದು ರೋಡ್ಸ್ ಹೇಳಿದರು.

ರೋಡ್ಸ್ ಐಪಿಎಲ್‌ನಲ್ಲಿ ದೀರ್ಘವಾದಿ ಮುಂಬೈ ಇಂಡಿಯನ್ಸ್ ತಂಡದ ಫಿಲ್ಡೀಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.