Asianet Suvarna News Asianet Suvarna News

ಕ್ರಿಕೆಟ್’ಗೆ ದಿಢೀರ್ ಗುಡ್ ಬೈ ಹೇಳಿದ ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್’ಮನ್..!

2009ರಿಂದ 2012ರವರೆಗೆ ಇಂಗ್ಲೆಂಡ್ ತಂಡ ಮೂರು ಆ್ಯಷಸ್ ಸರಣಿ ಗೆಲುವಿನಲ್ಲಿ ಟ್ರಾಟ್ ಪ್ರಮುಖ ಪಾತ್ರವಹಿಸಿದ್ದರು. ದಕ್ಷಿಣ ಆಫ್ರಿಕಾ ಮೂಲದ ಟ್ರಾಟ್ ಮೂರು ಮಾದರಿಯ ಕ್ರಿಕೆಟ್’ನಲ್ಲಿ ಆರು ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಅಲ್ಲದೇ 2011ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ.

Jonathan Trott announces retirement from all forms of cricket
Author
London, First Published Sep 27, 2018, 11:26 AM IST

ಲಂಡನ್[ಸೆ.27]: ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ನಂ.3ನೇ ಕ್ರಮಾಂಕದಲ್ಲಿ ಮಿಂಚಿದ್ದ ಜೊನಾಥನ್ ಟ್ರಾಟ್ ಎಲ್ಲಾ ಮಾದರಿಯ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 2015ರಲ್ಲಿ ಕೊನೆಯ ಬಾರಿಗೆ ವೆಸ್ಟ್’ಇಂಡಿಸ್ ವಿರುದ್ಧ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಟ್ರಾಟ್, ಆ ಬಳಿಕ ವರ್’ವಿಕ್’ಶೈರ್ ಪರ ಕೌಂಟಿ ಕ್ರಿಕೆಟ್ ಮುಂದುವರೆಸಿದ್ದರು.

2009ರಿಂದ 2012ರವರೆಗೆ ಇಂಗ್ಲೆಂಡ್ ತಂಡ ಮೂರು ಆ್ಯಷಸ್ ಸರಣಿ ಗೆಲುವಿನಲ್ಲಿ ಟ್ರಾಟ್ ಪ್ರಮುಖ ಪಾತ್ರವಹಿಸಿದ್ದರು. ದಕ್ಷಿಣ ಆಫ್ರಿಕಾ ಮೂಲದ ಟ್ರಾಟ್ ಮೂರು ಮಾದರಿಯ ಕ್ರಿಕೆಟ್’ನಲ್ಲಿ ಆರು ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಅಲ್ಲದೇ 2011ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ.

37 ವರ್ಷದ ಟ್ರಾಟ್ ಇಂಗ್ಲೆಂಡ್ ಪರ 52 ಟೆಸ್ಟ್ ಪಂದ್ಯಗಳನ್ನಾಡಿ 45 ಸರಾಸರಿಯಲ್ಲಿ 3,835 ರನ್ ಬಾರಿಸಿದ್ದಾರೆ. ಇದರಲ್ಲಿ 9 ಶತಕ ಹಾಗೂ 19 ಅರ್ಧಶತಕ ಸಿಡಿಸಿದ್ದಾರೆ. ಇನ್ನು 68 ಏಕದಿನ ಪಂದ್ಯಗಳಲ್ಲಿ 51ರ ಸರಾಸರಿಯಲ್ಲಿ 4 ಶತಕ ಹಾಗೂ 22 ಅರ್ಧಶತಕಗಳ ನೆರವಿನಿಂದ 2,819 ರನ್ ಬಾರಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್’ನಲ್ಲಿ 7 ಪಂದ್ಯಗಳನ್ನಾಡಿದ್ದರು.

Follow Us:
Download App:
  • android
  • ios