15 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಬದುಕು ಸವೆಸಿರುವ ಜೂಲನ್ ಈಗಲೂ ಭಾರತ ಮಹಿಳಾ ತಂಡದ ಪ್ರಮುಖ ಆಧಾರ ಸ್ತಂಭವಾಗಿದ್ದಾರೆ.
ನವದೆಹಲಿ(ಮೇ.09): ಭಾರತ ಮಹಿಳಾ ತಂಡದ ಹಿರಿಯ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್'ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಚತುಷ್ಕೋನ ಸರಣಿಯ ಪಂದ್ಯದಲ್ಲಿ ರೈಸಿಬೆ ನೊಜಾಕೆ ವಿಕೆಟ್ ಕಬಳಿಸುವ ಮೂಲಕ, 153 ಏಕದಿನ ಪಂದ್ಯಗಳ ವೃತ್ತಿಬದುಕಿನಲ್ಲಿ 181 ವಿಕೆಟ್ ಪಡೆಯುವ ಮೂಲಕ ಜೂಲನ್ ಗರಿಷ್ಠ ವಿಕೆಟ್ ಸಾಧನೆ ಮಾಡಿದರು.
ಈ ಮೊದಲು ಆಸ್ಟ್ರೇಲಿಯಾದ ಕ್ಯಾಥರೀನ್ ಫಿಟ್ಜ್'ಪ್ಯಾಟ್ರಿಕ್ 109 ಪಂದ್ಯಗಳಿಂದ 180 ವಿಕೆಟ್ ಪಡೆದು, ದಶಕಗಳ ಕಾಲ ದಾಖಲೆಯನ್ನು ತಮ್ಮ ಹೆಸರಿನಲ್ಲಿಟ್ಟುಕೊಂಡಿದ್ದರು.
2002ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು, 2007ರಲ್ಲಿ ಐಸಿಸಿ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದರು.
15 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಬದುಕು ಸವೆಸಿರುವ ಜೂಲನ್ ಈಗಲೂ ಭಾರತ ಮಹಿಳಾ ತಂಡದ ಪ್ರಮುಖ ಆಧಾರ ಸ್ತಂಭವಾಗಿದ್ದಾರೆ.
