ಅಫ್ರಿದಿ ಮ್ಯಾಚ್ ಫಿಕ್ಸ್ ಮಾಡಿದ್ದರ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ಅವರೆಲ್ಲ ಕಳ್ಳರ ಮಕ್ಕಳು, ಮ್ಯಾಚ್ ಫಿಕ್ಸಿಂಗ್ ಮಾಡುತ್ತಾರೆ. ಅಫ್ರಿದಿ ಹಾಗೂ ಇಡೀ ತಂಡವು ನನ್ನ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ನನ್ನ ಬಳಿ ಇದಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ಮಿಯಾಂದಾದ್ ಹೇಳಿದ್ದಾರೆ.
ನವದೆಹಲಿ(ಅ.10): ಇತ್ತೀಚೆಗಷ್ಟೇ ಸರ್ಜಿಕಲ್ ದಾಳಿಯ ಕುರಿತಂತೆ ಹೇಳಿಗೆ ನೀಡಿ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಈಗ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ.
ಅಫ್ರಿದಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಾರೆ. ಅಫ್ರಿದಿ ಹಣಕೋಸ್ಕರ ವಿದಾಯದ ಮ್ಯಾಚ್ ಆಡಲು ಎದುರು ನೋಡುತ್ತಿದ್ದಾರೆ ಎಂದು ಮಿಯಾಂದಾದ್ ಗಂಭೀರ ಆರೋಪ ಮಾಡಿದ್ದಾರೆ.
ಅಫ್ರಿದಿ ಮ್ಯಾಚ್ ಫಿಕ್ಸ್ ಮಾಡಿದ್ದರ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ಅವರೆಲ್ಲ ಕಳ್ಳರ ಮಕ್ಕಳು, ಮ್ಯಾಚ್ ಫಿಕ್ಸಿಂಗ್ ಮಾಡುತ್ತಾರೆ. ಅಫ್ರಿದಿ ಹಾಗೂ ಇಡೀ ತಂಡವು ನನ್ನ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ನನ್ನ ಬಳಿ ಇದಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ಮಿಯಾಂದಾದ್ ಹೇಳಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಫ್ರಿದಿ, ಜಾವೇದ್ ಮಿಯಾಂದಾದ್ ಯಾವಾಗಲೂ ಹಣದ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಕ್ರಿಕೆಟರ್'ಗಳಾದವರು ತನ್ನದೇ ಆದ ಗೌರವವನ್ನು ಹೊಂದಿರುತ್ತಾರೆ. ಇಮ್ರಾನ್ ಖಾನ್ ಹಾಗೂ ಜಾವೇದ್ ಮಿಯಾಂದಾದ್ ನಡುವೆ ಇರುವ ವ್ಯತ್ಯಾಸ ಇದೇ ಎಂದು ಅಫ್ರಿದಿ ಹೇಳಿದ್ದಾರೆ.