ಹಲವಾರು ಬಾರಿ ತಮ್ಮ ಅಮೋಘ ಬೌಲಿಂಗ್ ಮೂಲಕ ಶ್ರೀನಾಥ್ ತಂಡಕ್ಕೆ ಗೆಲುವಿನ ಸಿಹಿಯನ್ನು ಉಣಬಡಿಸಿದ್ದಾರೆ.

ಬೆಂಗಳೂರು(ಅ.10): ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಬೌಲರ್'ಗಳಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ಕೂಡ ಒಬ್ಬರು.

ಹಲವಾರು ಬಾರಿ ತಮ್ಮ ಅಮೋಘ ಬೌಲಿಂಗ್ ಮೂಲಕ ಶ್ರೀನಾಥ್ ತಂಡಕ್ಕೆ ಗೆಲುವಿನ ಸಿಹಿಯನ್ನು ಉಣಬಡಿಸಿದ್ದಾರೆ. ವೃತ್ತಿ ಜೀವನದ ಆರಂಭದಲ್ಲೇ ಕರಾರುವಕ್ಕಾದ ದಾಳಿ ನಡೆಸುವ ಮೂಲಕ ತಂಡದಲ್ಲಿ ಶ್ರೀನಾಥ್ ಭದ್ರವಾಗಿ ನೆಲೆಯೂರಿಬಿಟ್ಟರು.

ಭಾರತ-ವೆಸ್ಟ್ ಇಂಡೀಸ್ ನಡುವೆ ನಡೆದ ಪಂದ್ಯದಲ್ಲಿ ಶ್ರೀನಾಥ್ ಎಸೆದ ಶ್ರೇಷ್ಟ ಎಸೆತಕ್ಕೆ ಕೆನೀತ್ ಆರ್ಥರ್ ಬಳಿ ಉತ್ತರವೇ ಇರಲಿಲ್ಲ. ವೇಗವಾಗಿ ಬಂದ ಚೆಂಡು ತಿರುವು ಪಡೆದು ವಿಕೆಟ್ ಎಗರಿಸಿದ ಅಪರೂಪದ ವಿಡಿಯೋ ನಿಮಗಾಗಿ...