ಪಾಕಿಸ್ತಾನದ ಇಮಾದ್ ವಸೀಂ ಒಂದು ಸ್ಥಾನ ಕೆಳಗಿಳಿದಿದ್ದು, ಬೂಮ್ರಾ ಅಗ್ರಸ್ಥಾನಕ್ಕೇರಲು ಸಹಕಾರಿಯಾಯಿತು.
ದುಬೈ(ಅ.31): ಭಾರತದ ಯುವ ವೇಗಿ ಜಸ್‌ಪ್ರೀತ್ ಬೂಮ್ರಾ ಮಂಗಳವಾರ ಪ್ರಕಟಗೊಂಡ ನೂತನ ಐಸಿಸಿ ಶ್ರೇಣಿ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.
ಸೋಮವಾರವಷ್ಟೇ ಏಕದಿನ ಶ್ರೇಣಿಯಲ್ಲಿ 3ನೇ ಸ್ಥಾನಕ್ಕೇರಿ ವೃತ್ತಿಬದುಕಿನ ಶ್ರೇಷ್ಠ ರಾಂಕಿಂಗ್ ಸಾಧಿಸಿದ ಬೂಮ್ರಾ, ಒಂದು ಸ್ಥಾನ ಏರಿಕೆ ಕಂಡು ನಂ.1 ಟಿ20 ಬೌಲರ್ ಎನಿಸಿಕೊಂಡರು. ಪಾಕಿಸ್ತಾನದ ಇಮಾದ್ ವಸೀಂ ಒಂದು ಸ್ಥಾನ ಕೆಳಗಿಳಿದಿದ್ದು, ಬೂಮ್ರಾ ಅಗ್ರಸ್ಥಾನಕ್ಕೇರಲು ಸಹಕಾರಿಯಾಯಿತು. ಇದೇ ವೇಳೆ ಸೋಮವಾರವಷ್ಟೇ ಏಕದಿನ ಬ್ಯಾಟ್ಸ್‌ಮನ್‌ಗಳ ರಾಂಕಿಂಗ್ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದ ವಿರಾಟ್ ಕೊಹ್ಲಿ, ಟಿ20 ಬ್ಯಾಟ್ಸ್ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದರೊಂದಿಗೆ ಟಿ20 ಪಟ್ಟಿಯಲ್ಲಿ ಅಗ್ರ ಬ್ಯಾಟ್ಸ್‌ಮನ್ ಹಾಗೂ ಬೌಲರ್ ಸ್ಥಾನವನ್ನು ಭಾರತೀಯರೇ ಪಡೆದಂತಾಗಿದೆ.
