ತಮ್ಮ ನಿಖರವಾದ ಯಾರ್ಕರ್, ಇನ್'ಸ್ವಿಂಗ್ ಹಾಗೂ ಔಟ್'ಸ್ವಿಂಗ್'ಗಳ ಮೂಲಕ ಎದುರಾಳಿ ಬ್ಯಾಟ್ಸ್'ಮನ್'ಗಳ ನಿದ್ದೆಗೆಡಿಸಿರುವ ಜಿಮ್ಮಿ, ಭಾರತದಲ್ಲೂ ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. 

ನವದೆಹಲಿ(ನ.05): ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದಿರುವ ಆ್ಯಂಡರ್'ಸನ್, ನವೆಂಬರ್ 17ರಿಂದ 21ರವರೆಗೆ ವಿಶಾಖಪಟ್ಟಣಂನಲ್ಲಿ ನಡೆಯುವ 2ನೇ ಟೆಸ್ಟ್ ಪಂದ್ಯಕ್ಕೆ ತಂಡದ ವೇಗದ ಬೌಲಿಂಗ್ ಸಾರಥ್ಯವನ್ನು ವಹಿಸಲಿದ್ದಾರೆ. ತಮ್ಮ ಅನುಭವಿ ಬೌಲಿಂಗ್ ಮೂಲಕ ಶ್ರೇಷ್ಟ ಬ್ಯಾಟ್ಸ್'ಮನ್'ಗಳಿಗೆ ಪೆವಿಲಿಯನ್ ಹಾದಿ ತೋರಿಸಿರುವ ಆ್ಯಂಡರ್'ಸನ್ ಟೀಂ ಇಂಡಿಯಾ ಬ್ಯಾಟ್ಸ್'ಮನ್'ಗಳಿಗೆ ಸವಾಲಾಗುವ ಸಾಧ್ಯತೆಯಿದೆ

ತಮ್ಮ ನಿಖರವಾದ ಯಾರ್ಕರ್, ಇನ್'ಸ್ವಿಂಗ್ ಹಾಗೂ ಔಟ್'ಸ್ವಿಂಗ್'ಗಳ ಮೂಲಕ ಎದುರಾಳಿ ಬ್ಯಾಟ್ಸ್'ಮನ್'ಗಳ ನಿದ್ದೆಗೆಡಿಸಿರುವ ಜಿಮ್ಮಿ, ಭಾರತದಲ್ಲೂ ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. 

ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್'ಸನ್, ಭಾರತ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್ ನಾಯಕ ಅಲಿಸ್ಟಾರ್ ಕುಕ್ ಹೇಳಿದ್ದಾರೆ.

ಇದೇ ತಿಂಗಳು 9ರಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗುವ ಮೊದಲ ಟೆಸ್ಟ್ ವೇಳೆಗೆ ಜಿಮ್ಮಿ ತಂಡ ಸೇರಲಿದ್ದಾರೆ. ಆದರೆ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

34 ವರ್ಷ ವಯಸ್ಸಿನ ಜಿಮ್ಮಿ ಕೆಲದಿನಗಳಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಸೂಕ್ತ ಚಿಕಿತ್ಸೆ ಪಡೆದಿರುವ ಅವರು ಶೀಘ್ರ ಚೇತರಿಸಿಕೊಳ್ಳಲಿದ್ದಾರೆ ಎಂದು ಇಸಿಬಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.