ಧೋನಿ ಇನ್ನಷ್ಟು ದಿನ ಟೀಂ ಇಂಡಿಯಾದ ನಾಯಕನಾಗಿ ಮುಂದುವರಿಯಬೇಕಿತ್ತೇ ಎಂಬ ಪ್ರಶ್ನೆಗೆ ಇದು ಧೊನಿಯ ವೈಯುಕ್ತಿಕ ನಿರ್ಧಾರ. ಆ ಕುರಿತು ನಾನು ಪ್ರತಿಕ್ರಿಯಿಸುವುದರಿಂದೇನು ಬದಲಾಗುವುದಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.
ಚೆನ್ನೈ(ಜ.07): ಮೂರೂ ಪ್ರಕಾರದ ಕ್ರಿಕೆಟ್'ನಲ್ಲಿ ಧೋನಿಯಂತೆ ಭಾರತ ತಂಡವನ್ನು ಯಶಸ್ಸಿನತ್ತ ಮುನ್ನಡೆಸುವುದು, ಈಗಷ್ಟೇ ಈ ಸವಾಲಿನ ಸಾರಥ್ಯ ವಹಿಸಿಕೊಂಡಿರುವ ವಿರಾಟ್ ಕೊಹ್ಲಿ ಸೇರಿದಂತೆ ಯಾರೊಬ್ಬರಿಗೂ ಸುಲಭಸಾಧ್ಯವಾದಂತ ಕೆಲಸವಲ್ಲ ಎಂದು ಭಾರತ ತಂಡದ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
‘‘ಒಬ್ಬ ಅದ್ವಿತೀಯ ನಾಯಕನಾಗಿ ಧೋನಿ ಜಗತ್ಪ್ರಸಿದ್ಧಿ ಪಡೆದವರು. 2000ದ ವೇಳೆ ಸೌರವ್ ಗಂಗೂಲಿ ಕೂಡ ಇದೇರೀತಿ ಉತ್ಸಾಹಭರಿತರಾಗಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದರು. ಆದರೆ, ಅವರನ್ನೂ ಹಿಂದಿಕ್ಕುವಷ್ಟು ಪ್ರಭಾವಶಾಲಿ ವೃತ್ತಿಬದುಕು ಧೋನಿ ಅವರದ್ದು. ಹೀಗಾಗಿ ವಿರಾಟ್ ಕೊಹ್ಲಿ ಮೇಲೆ ಈ ಹಿಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಹಾಗೂ ಸವಾಲು ಎದುರಾಗಿದೆ’’ ಎಂದು ತಮಿಳುನಾಡು ಮೂಲದ ಅಶ್ವಿನ್ ಹೇಳಿದ್ದಾರೆ.
ಧೋನಿ ಇನ್ನಷ್ಟು ದಿನ ಟೀಂ ಇಂಡಿಯಾದ ನಾಯಕನಾಗಿ ಮುಂದುವರಿಯಬೇಕಿತ್ತೇ ಎಂಬ ಪ್ರಶ್ನೆಗೆ ಇದು ಧೊನಿಯ ವೈಯುಕ್ತಿಕ ನಿರ್ಧಾರ. ಆ ಕುರಿತು ನಾನು ಪ್ರತಿಕ್ರಿಯಿಸುವುದರಿಂದೇನು ಬದಲಾಗುವುದಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.