ಇದೇ ವರ್ಷ ಜೂನ್ 19ರಂದು ಇಬ್ಬರ ವಿವಾಹ ನಿಶ್ಚಯವಾಗಿತ್ತು. ವಾರಾಣಸಿ ಮೂಲದ, ಭಾರತ ಬಾಸ್ಕೆಟ್‌ಬಾಲ್ ಮಹಿಳಾ ತಂಡದ ನಾಯಕಿಯೂ ಆದ ಪ್ರತಿಮಾ ಸಿಂಗ್ ಏಷ್ಯಾ ಕ್ರೀಡಾಕೂಟವಲ್ಲದೆ ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಸುತ್ತಾ ಬರುತ್ತಿದ್ದಾರೆ.

ವಾರಾಣಾಸಿ(ನ.03): ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಮತ್ತು ಬಾಸ್ಕೆಟ್‌ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ಅವರ ವಿವಾಹವು ಮುಂದಿನ ತಿಂಗಳು ಡಿಸೆಂಬರ್ 9ಕ್ಕೆ ಜರುಗಲಿದೆ.

ಇದೇ ವರ್ಷ ಜೂನ್ 19ರಂದು ಇಬ್ಬರ ವಿವಾಹ ನಿಶ್ಚಯವಾಗಿತ್ತು. ವಾರಾಣಸಿ ಮೂಲದ, ಭಾರತ ಬಾಸ್ಕೆಟ್‌ಬಾಲ್ ಮಹಿಳಾ ತಂಡದ ನಾಯಕಿಯೂ ಆದ ಪ್ರತಿಮಾ ಸಿಂಗ್ ಏಷ್ಯಾ ಕ್ರೀಡಾಕೂಟವಲ್ಲದೆ ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಸುತ್ತಾ ಬರುತ್ತಿದ್ದಾರೆ.

‘ಸಿಂಗ್ ಸಿಸ್ಟರ್ಸ್‌’ ಎಂದೇ ಕರೆಯಲ್ಪಡುವ ಐವರು ಸೋದರಿಯರ ಪೈಕಿ, ಪ್ರತಿಮಾ ಕೊನೆಯವರು.

ಅಂದಹಾಗೆ ಈ ಐವರು ಆಟಗಾರ್ತಿಯರೂ ಬಾಸ್ಕೆಟ್‌ಬಾಲ್ ಪಟುಗಳೆಂಬುದು ಗಮನಾರ್ಹ.