ಗಾಯದಿಂದ ಚೇತರಿಸಿಕೊಳ್ಳದ ಕಾರಣ, ಐಪಿಎಲ್‌'ನಿಂದ ಹೊರಬಿದ್ದ ಡ್ವೇನ್‌ ಬ್ರಾವೋ ಬದಲಿಗೆ ಗುಜರಾತ್‌ ಲಯನ್ಸ್‌ ಇರ್ಫಾನ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ನವದೆಹಲಿ(ಏ.26): ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗದೇ ಉಳಿದಿದ್ದ ಆಲ್ರೌಂಡರ್‌ ಇರ್ಫಾನ್‌ ಪಠಾಣ್‌, ಕೊನೆಗೂ 10ನೇ ಆವೃತ್ತಿಯ ಐಪಿಎಲ್‌'ನಲ್ಲಿ ಗುಜರಾತ್ ಲಯನ್ಸ್ ಪರ ಆಡುವ ಅವಕಾಶ ಪಡೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಾಯದಿಂದ ಚೇತರಿಸಿಕೊಳ್ಳದ ಕಾರಣ, ಐಪಿಎಲ್‌'ನಿಂದ ಹೊರಬಿದ್ದ ಡ್ವೇನ್‌ ಬ್ರಾವೋ ಬದಲಿಗೆ ಗುಜರಾತ್‌ ಲಯನ್ಸ್‌ ಇರ್ಫಾನ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 50 ಲಕ್ಷ ರೂಪಾಯಿ ಮುಖಬೆಲೆ ಹೊಂದಿದ್ದ ಪಠಾಣ್‌ ಅವರನ್ನು ಹರಾಜಿನಲ್ಲಿ ಯಾವ ಫ್ರಾಂಚೈಸಿಯೂ ಖರೀದಿಸುವ ಆಸಕ್ತಿ ತೋರಿರಲಿಲ್ಲ.

ಕಳೆದ 9 ವರ್ಷಗಳಲ್ಲಿ ಕಿಂಗ್ಸ್‌ ಇಲೆವೆನ್‌, ಡೆಲ್ಲಿ ಡೇರ್‌ಡೆವಿಲ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌'ರೈಸರ್ಸ್ ಹೈದರಾಬಾದ್‌ ಹಾಗೂ ಪುಣೆ ಸೂಪರ್‌'ಜೈಂಟ್‌ ತಂಡಗಳನ್ನು ಪ್ರತಿನಿಧಿಸಿದ್ದರು. 102 ಐಪಿಎಲ್‌ ಪಂದ್ಯಗಳನ್ನು ಆಡಿರುವ ಅವರು, 1137 ರನ್‌ ಹಾಗೂ 80 ವಿಕೆಟ್‌ ಕಬಳಿಸಿದ್ದಾರೆ.