ಇರ್ಫಾನ್ ತಮ್ಮ ಮಗನಿಗೆ ಇಮ್ರಾನ್ ಖಾನ್ ಪಠಾಣ್ ಎಂದು ಹೆಸರಿಟ್ಟಿದ್ದಾರೆ.

ನವದೆಹಲಿ(ಡಿ.27): ಇತ್ತೀಚೆಗಷ್ಟೇ ಜನಿಸಿರುವ ತಮ್ಮ ಗಂಡುಮಗುವಿಗೆ ದಾವೂದ್ ಅಥವಾ ಯಾಕೂಬ್ ಅಂತ ಹೆಸರಿಡಬೇಡಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಉಚಿತ (ಅನುಚಿತ) ಸಲಹೆಗಳನ್ನು ನೀಡಿದ್ದ ಮಂದಿಗೆ ಭಾರತೀಯ ಕ್ರಿಕೆಟ್ ತಂಡದ ವೇಗಿ ಇರ್ಫಾನ್ ಪಠಾಣ್ ತಿರುಗೇಟು ನೀಡಿದ್ದಾರೆ.

‘‘ಹೆಸರು ಯಾವುದಾದರೇನು ಬಿಡಿ ಸ್ವಾಮಿ, ನನ್ನ ಮಗ ನನ್ನಂತೆ ಹಾಗೂ ಅವರ ಅಂಕಲ್ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡ್ತಾನೆ’’ ಎಂದು ಹೇಳಿ ಬಾಯಿಮುಚ್ಚಿಸಿದ್ದಾರೆ.

ಇರ್ಫಾನ್ ತಮ್ಮ ಮಗನಿಗೆ ಇಮ್ರಾನ್ ಖಾನ್ ಪಠಾಣ್ ಎಂದು ಹೆಸರಿಟ್ಟಿದ್ದಾರೆ.