ಜೈಪುರ(ಮೇ.06): ಐಪಿಎಲ್ ಟೂರ್ನಿ ಪ್ಲೇ ಆಫ್ ಪಂದ್ಯದ ನಡುವೆ ನಡೆಯುತ್ತಿರುವ ಮಹಿಳಾ IPL ಪ್ರದರ್ಶನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. 2019ರ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯದಲ್ಲಿ ಸೂಪರ್‌ನೋವಾಸ್ ಹಾಗೂ ಟ್ರೈಲ್‌ಬ್ಲೇಜರ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಹರ್ಮನ್‌ಪ್ರೀತ್ ನಾಯಕತ್ವದ ಸೂಪರ್‌ನೋವಾಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.