ಪ್ರತಿ ವರ್ಷ ಒಂದು ತಿಂಗಳಿಗಿಂತ ಹೆಚ್ಚು ಕಾಲ ಐಪಿಎಲ್ ಆಡುವುದರಿಂದ ಆಟಗಾರರು ಧಣಿಯುವ ಸಾಧ್ಯತೆ ಹೆಚ್ಚಿದ್ದು, ಇದು ಅಂತರರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ ಪಂದ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಸಿಡ್ನಿ(ಮೇ.11): ಮುಂದಿನ ವರ್ಷದಿಂದ ನಡೆಯುವ 11ನೇ ಆವೃತ್ತಿಯ ಐಪಿಎಲ್'ನಲ್ಲಿ ಆಸ್ಟ್ರೇಲಿಯಾದ ಆಟಗಾರರು ಪಾಲ್ಗೊಳ್ಳುವುದು ಬಹುತೇಕ ಅನುಮಾನವಾಗಿದೆ. ಸ್ವತಃ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯೇ ಐಪಿಎಲ್'ನಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಿದೆ.

ಪ್ರತಿ ವರ್ಷ ಒಂದು ತಿಂಗಳಿಗಿಂತ ಹೆಚ್ಚು ಕಾಲ ಐಪಿಎಲ್ ಆಡುವುದರಿಂದ ಆಟಗಾರರು ಧಣಿಯುವ ಸಾಧ್ಯತೆ ಹೆಚ್ಚಿದ್ದು, ಇದು ಅಂತರರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ ಪಂದ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅಲ್ಲದೆ ಐಪಿಎಲ್ ನೀಡುವುದಕ್ಕಿಂತ ಹೆಚ್ಚು ದೇಣಿಗೆಯನ್ನು ಮಂಡಳಿಯೇ ನೀಡುವುದಾಗಿ ತಿಳಿಸಿದೆ. ಒಂದು ವೇಳೆ ಆಸ್ಟ್ರೇಲಿಯಾ ತಂಡದ ಆಟಗಾರರು ಮುಂದಿನ ಐಪಿಎಲ್'ನಿಂದ ಆಡದಿದ್ದರೆ ಐಪಿಎಲ್ ಪ್ರಮುಖ ತಂಡಗಳ ಆಟಗಾರರಾದ ಸ್ಟೀವ್ ಸ್ಮಿತ್,ಡೇವಿಡ್ ವಾರ್ನರ್, ಮ್ಯಾಕ್ಸ್'ವೆಲ್, ಆರೋನ್ ಫಿಂಚ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಸೇರಿದಂತೆ ಹಲವು ಆಟಗಾರರ ಸೊಬಗನ್ನು ಭಾರತೀಯ ಪ್ರೇಕ್ಷಕರು ಮಿಸ್ ಮಾಡಿಕೊಳ್ಳಬೇಕಾಗುತ್ತದೆ.