ಐಪಿಎಲ್ ಉದ್ಘಾಟನಾ ಕ್ಷಣಕ್ಕೆ ರಂಗು ಹೆಚ್ಚಿಸಲಿದ್ದಾರೆ ಬಾಲಿವುಡ್ ಸ್ಟಾರ್ಸ್; ಆದರೆ ಈ ಬಾಲಿವುಡ್ ಸೆಲಿಬ್ರಿಟಿ ಭಾಗವಹಿಸುತ್ತಿಲ್ಲ..!

First Published 7, Apr 2018, 3:34 PM IST
IPL inauguration on 7 April
Highlights

ಉದ್ಘಾಟನಾ ಸಮಾರಂಭದಲ್ಲಿ ರಣವೀರ್ ಸಿಂಗ್ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ 'ಖಿಲ್ಜಿ' ಖ್ಯಾತಿಯ ರಣವೀರ್ ಐಪಿಎಲ್'ನ ಉದ್ಘಾಟನಾ ಪಂದ್ಯದಲ್ಲಿ ಕಾರ್ಯಕ್ರಮ ನೀಡುತ್ತಿಲ್ಲ ಎನ್ನಲಾಗುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಕೇವಲ 2 ತಂಡಗಳ ನಾಯಕರಾದ ಎಂ. ಎಸ್.ಧೋನಿ ಹಾಗೂ ರೋಹಿತ್ ಶರ್ಮಾ ಪಾಲ್ಗೊಳ್ಳಲಿದ್ದಾರೆ. ಇನ್ನುಳಿದ ತಂಡಗಳ ಪರವಾಗಿ ಫ್ರಾಂಚೈಸಿಗಳು ಉಪಸ್ಥಿತರಿರಲಿದ್ದಾರೆ.

ಮುಂಬೈ(ಏ.07): ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಗೆ ಇಂದು ಸಂಜೆ 6.15ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.

ಬಾಲಿವುಡ್ ತಾರೆಯರಾದ ಹೃತಿಕ್ ರೋಶನ್, ತಮನ್ಹಾ ಭಾಟಿಯಾ, ವರುಣ್ ಧವನ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಕಿಚ್ಚು ಹತ್ತಿಸಲಿದ್ದಾರೆ. ಸಂಜೆ 6.15ಕ್ಕೆ ಆರಂಭವಾಗಲಿರುವ ಕಾರ್ಯಕ್ರಮ ಸುಮಾರು 1 ತಾಸು ನಡೆಯಲಿದ್ದು, 7.15ಕ್ಕೆ ಮುಕ್ತಾಯಗೊಳ್ಳಲಿದೆ.

loader