ವಿಶಾಖಪಟ್ಟಣಂ(ಮೇ.08): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯ ಇದೀಗ ಉಭಯ ತಂಡದ ಎದೆಬಡಿತ ಹೆಚ್ಚಿಸಿದೆ. ನಾಕೌಟ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ  8 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿದೆ. ಇದೀಗ 2ನೇ ಕ್ವಾಲಿಫೈಯರ್ ಪ್ರವೇಶಿಸಲು ಡೆಲ್ಲಿ ಕ್ಯಾಪಿಟಲ್ಸ್ 163 ರನ್ ಟಾರ್ಗೆಟ್ ಚೇಸ್ ಮಾಡಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಲಿದ ಹೈದರಾಬಾದ್ 31 ರನ್ ಸಿಡಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ವೃದ್ಧಿಮಾನ್ ಸಾಹ 8 ರನ್ ಸಿಡಿಸಿ ಔಟಾದರು. ಮಾರ್ಟಿನ್ ಗಪ್ಟಿಲ್ 19 ಎಸೆತದಲ್ಲಿ 4 ಸಿಕ್ಸರ್ ನೆರವಿನಿಂದ 36 ರನ್ ಸಿಡಿಸಿ ನಿರ್ಗಮಿಸಿದರು. ಗಪ್ಟಿಲ್ ಹೊರತು ಪಡಿಸಿದರೆ ಇತರ ಎಲ್ಲಾ ಬ್ಯಾಟ್ಸ್‌ಮನ್‌ಗಳು ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು.

ಮನೀಶ್ ಪಾಂಡೆ 36 ಎಸೆತದಲ್ಲಿ 30 ರನ್ ಸಿಡಿಸಿ ಔಟಾದರು. ಇನ್ನು ನಾಯಕ ಕೇನ್ ವಿಲಿಯಮ್ಸನ್ 27 ಎಸೆತದಲ್ಲಿ 28 ರನ್ ಸಿಡಿಸಿದರು.  ಮೊಹಮ್ಮದ್ ನಬಿ ಹಾಗೂ ವಿಜಯ್ ಶಂಕರ್ ಬ್ಯಾಟಿಂಗ್‌ನಿಂದ ಹೈದರಾಬಾದ್ ಚೇತರಿಸಿಕೊಂಡಿತು. ಶಂಕರ್ 25 ರನ್ ಸಿಡಿಸಿ ಔಟಾದರು. ನಬಿ 20 ರನ್ ಸಿಡಿಸಿ ಔಟಾದರು.  ದೀಪಕ್ ಹೂಡ 4 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಈ ಮೂಲಕ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು.