ವಿಶಾಖಪಟ್ಟಣಂ(ಮೇ.08): ಐಪಿಎಲ್ ಟೂರ್ನಿಯ ಪ್ಲೇ ಆಫ್ ಪಂದ್ಯಗಳು ತೀವ್ರ ಕತೂಹಲ ಕೆರಳಿಸುತ್ತಿದೆ. ಇದೀಗ ಎಲಿಮಿನೇಟರ್ಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ  ಡೆಲ್ಲಿ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ಉಭಯ ತಂಡದಲ್ಲಿ ಒಂದೊಂದು ಬದಲಾವಣೆ ಮಾಲಾಗಿದೆ.

 

 

ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ 14 ಪಂದ್ಯದಿಂದ 9 ಗೆಲುವು ಹಾಗೂ 5 ಸೋಲಿನಿಮಂದ 18 ಅಂಕ ಸಂಪಾದಿಸೋ ಮೂಲಕ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿತು. ಇತ್ತ ಹೈದರಾಬಾದ್ ಕೇವಲ 12 ಅಂಕ ಸಂಪಾದಿಸಿ, ಇತರ ತಂಡದ ಫಲಿತಾಂಶದ ಮೇಲೆ ಅವಲಂಬಿತವಾಗಿತ್ತು. ಕೆಕೆಆರ್ ಸೋಲಿನೊಂದಿಗೆ ಅದೃಷ್ಠ ಖುಲಾಯಿಸಿದ ಹೈದರಾಬಾದ್ ತಂಡಕ್ಕೆ ಪ್ಲೇ ಆಫ್‌ ಅವಕಾಶ ಸಿಕ್ಕಿತು. ಈ ಮೂಲಕ 12 ಅಂಕ ಪಡೆದು ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಹೈದರಾಬಾದ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.