ಮುಂಬೈ(ಸೆ.24): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಷ್ಟು ಜನಪ್ರಿಯವಾಗಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೇಗಷ್ಟೇ ಮುಕ್ತಾಯ ಕಂಡ ಐಪಿಎಲ್ ಟೂರ್ನಿಯಿಂದ 4.5 ಬಿಲಿಯನ್ ಡಾಲರ್ (27,000 ಕೋಟಿ ರೂಪಾಯಿ) ವಾರ್ಷಿಕ ಆದಾಯ ಸಂದಾಯವಾಗಿದೆ ಎಂದು ಬಿಸಿಸಿಐ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2015-16ನೇ ಸಾಲಿನಲ್ಲಿ 27 ಸಾವಿರ ಕೋಟಿ ರೂಪಾಯಿ ಬಿಸಿಸಿಐಗೆ ಹರಿದುಬಂದಿದೆ. ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು 102 ಕೋಟಿ ಮಂದಿ ಟಿವಿಯಲ್ಲಿ ವೀಕ್ಷಿಸಿದ್ದಾರೆ ಎಂದು ಭಾರತದ ಬ್ರಾಡ್‌ಕಾಸ್ಟ್ ವೀಕ್ಷಕರ ಅಧ್ಯಯನ ಕೇಂದ್ರ, ಐಪಿಎಲ್ ವ್ಯವಸ್ಥಾಪನಾ ಸಲಹಾ ಸಮಿತಿಗೆ ನೀಡಿದ ವರದಿಯಲ್ಲಿ ಹೇಳಿದೆ.

ರಾಷ್ಟ್ರದಲ್ಲಿ ಐಪಿಎಲ್ ಟೂರ್ನಿಯ ಜನಪ್ರಿಯತೆ ಏರುತ್ತಲೇ ಸಾಗಿದ್ದು, ಪ್ರತಿ ಬಾರಿಯ ಲೀಗ್‌ಗಿಂತ ಈ ಬಾರಿ ಶೇ 0.6ರಷ್ಟು ಜಿಡಿಪಿ ಏರಿಕೆ ಕಂಡಿದೆ.