ಐಪಿಎಲ್ ಬೆಟ್ಟಿಂಗ್‌ನಲ್ಲಿ ಬಾಲಿವುಡ್ ನಿರ್ಮಾಪಕ ಅರ್ಬಾಝ್ ಖಾನ್

IPL Betting Scam: Actor Arbaaz Khan summoned by Thane Police
Highlights

ಐಪಿಎಲ್ ಬೆಟ್ಟಿಂಗ್ ಆರೋಪದಡಿ ಬಾಲಿವುಡ್ ನಟ, ನಿರ್ಮಾಪಕ ಅರ್ಬಾಝ್ ಖಾನ್‌ಗೆ ಮುಂಬೈನ ಥಾಣೆ ಪೊಲೀಸರು ಸಮನ್ಸ್ ಜಾರಿಮಾಡಿದ್ದಾರೆ. ತಕ್ಷಣವೇ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ಮುಂಬೈ(ಜೂನ್.1) ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡರೂ, ಬೆಟ್ಟಿಂಗ್ ಕರಿನೆರಳಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ, ನಟ ಹಾಗೂ ನಿರ್ಮಾಪಕ ಅರ್ಬಾಝ್ ಖಾನ್ ಹೆಸರು ಥಳುಕುಹಾಕಿಕೊಂಡಿದೆ. ಬುಕ್ಕಿ ನೀಡಿದ ಮಾಹಿತಿ ಆಧಾರದಲ್ಲಿ ಮುಂಬೈನ ಥಾಣೆ ಪೊಲೀಸರು ಅರ್ಭಾಝ್ ಖಾನ್‌ಗೆ ಸಮನ್ಸ್ ಜಾರಿ ಮಾಡಿದ್ದಾರೆ. 

ಬುಕ್ಕಿಯಂದಿಗೆ ನಂಟು ಹೊಂದಿರುವ ಆರೋಪದಡಿ ಥಾಣೆ ಪೊಲೀಸರು ಅರ್ಬಾಝ್ ಖಾನ್‌ಗೆ ಸಮನ್ಸ್ ಜಾರಿ ಮಾಡಿದ್ದಾರೆ.  ಅರ್ಬಾಝ್ ಖಾನ್ ತಕ್ಷಣವೇ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದಾರೆ. ಇತ್ತೀಚೆಗೆ ಐಪಿಎಲ್ ಬೆಟ್ಟಿಂಗ್ ಆರೋಪಡಿ ಪ್ರಮುಖ ಬುಕ್ಕಿ ಸೋನು ಬಂಧಿಯಾಗಿದ್ದರು. ಸೋನು ವಿಚಾರಣೆ ವೇಳೆ ಅರ್ಬಾಝ್ ಖಾನ್ ಹೆಸರು ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪೊಲೀಸರು ಅರ್ಬಾಝ್ ಖಾನ್‌ಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
 

loader