ಡೆಲ್ಲಿ ಫ್ರಾಂಚೈಸಿ ದಕ್ಷಿಣ ಆಫ್ರಿಕದ ಸ್ಫೋಟಕ ಬ್ಯಾಟ್ಸ್’ಮನ್ ಕಾಲಿನ್ ಇಂಗ್ರಾಮ್ 6.40 ರುಪಾಯಿ ನೀಡಿ ಖರೀದಿಸಿದೆ, ಇನ್ನು ಅಕ್ಷರ್ ಪಟೇಲ್ 5 ಕೋಟಿ, ಹನುಮ ವಿಹಾರಿ, ಶೆರ್ಫಾನೆ ರುದರ್’ರ್ಫೊರ್ಡ್ ತಲಾ 2 ಕೋಟಿ ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ ಹರಾಜಾಗದೇ ಉಳಿದಿದ್ದ ವೇಗಿ ಇಶಾಂತ್ ಶರ್ಮಾ ಅವರನ್ನು 1.10 ಕೋಟಿ ನೀಡಿ ಖರೀದಿಸಿದೆ.
ಬೆಂಗಳೂರು[ಡಿ.18]: ಕಳೆದ 11 ಆವೃತ್ತಿಗಳಿಂದಲೂ ಪ್ರಶಸ್ತಿಯ ಬರ ಅನುಭವಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಸಾಕಷ್ಟು ಅಳೆದು ತೂಗಿ 10 ಆಟಗಾರರನ್ನು ಖರೀದಿಸಿದೆ.
10 ಆಟಗಾರರ ಪೈಕಿ ಐವರು ಕ್ರಿಕೆಟಿಗರು ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಡೆಲ್ಲಿ ಫ್ರಾಂಚೈಸಿ ದಕ್ಷಿಣ ಆಫ್ರಿಕದ ಸ್ಫೋಟಕ ಬ್ಯಾಟ್ಸ್’ಮನ್ ಕಾಲಿನ್ ಇಂಗ್ರಾಮ್ 6.40 ರುಪಾಯಿ ನೀಡಿ ಖರೀದಿಸಿದೆ, ಇನ್ನು ಅಕ್ಷರ್ ಪಟೇಲ್ 5 ಕೋಟಿ, ಹನುಮ ವಿಹಾರಿ, ಶೆರ್ಫಾನೆ ರುದರ್’ರ್ಫೊರ್ಡ್ ತಲಾ 2 ಕೋಟಿ ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ ಹರಾಜಾಗದೇ ಉಳಿದಿದ್ದ ವೇಗಿ ಇಶಾಂತ್ ಶರ್ಮಾ ಅವರನ್ನು 1.10 ಕೋಟಿ ನೀಡಿ ಖರೀದಿಸಿದೆ. ಇನ್ನುಳಿದಂತೆ, ಕೀಮೋ ಪೌಲ್ [50 ಲಕ್ಷ], ಜಲಜಾ ಸಕ್ಸೇನಾ, ಅಂಕುಶ್ ಬೈನ್ಸ್, ನಾತು ಸಿಂಗ್ ಮತ್ತು ಬಂಡಾರು ಅಯ್ಯಪ್ಪ ತಲಾ 20 ಲಕ್ಷ ರುಪಾಯಿಗೆ ಡೆಲ್ಲಿ ಪಾಲಾಗಿದ್ದಾರೆ.
ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ ನೋಡಿ..

ರೀಟೈನ್ ಮಾಡಿಕೊಂಡಿದ್ದ ಡೆಲ್ಲಿ ಆಟಗಾರರಿವರು:
ಶ್ರೇಯಸ್ ಅಯ್ಯರ್[ನಾಯಕ], ರಿಷಭ್ ಪಂತ್, ಪೃಥ್ವಿ ಶಾ, ಅಮಿತ್ ಮಿಶ್ರಾ, ಆವೇಶ್ ಖಾನ್, ಹರ್ಷಲ್ ಪಟೇಲ್, ರಾಹುಲ್ ಟಿವಾಟಿಯಾ, ಜಯಂತ್ ಯಾದವ್, ಮಂಜೋತ್ ಕಲ್ರಾ, ಕಾಲಿನ್ ಮನ್ರೋ, ಕ್ರಿಸ್ ಮೋರಿಸ್, ಕಗಿಸೋ ರಬಾಡ, ಸಂದೀಪ್ ಲ್ಯಾಮಿಚ್ಚಾನೆ, ಟ್ರೆಂಟ್ ಬೌಲ್ಟ್, ಶಿಖರ್ ಧವನ್, ಶಾಬಾಜ್ ನದೀಮ್.
