ಐಪಿಎಲ್ 2019: ನಿರ್ಧಾರ ಪ್ರಕಟಿಸಿದ ಎಬಿ ಡಿವಿಲಿಯರ್ಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Sep 2018, 5:14 PM IST
IPL AB devillers happy to continue his contract with RCB
Highlights

11ನೇ ಆವೃತ್ತಿ ಐಪಿಎಲ್ ಟೂರ್ನಿ ಬಳಿಕ ದಿಢೀರ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಎಬಿ ಡಿವಿಲಿಯರ್ಸ್ 12ನೇ ಆವೃತ್ತಿ ಐಪಿಎಲ್ ಆಡೋ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಎಬಿಡಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಕೇಪ್‌ಟೌನ್(ಸೆ.05): ಸೌತ್ಆಫ್ರಿಕಾ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಭಾರತದಲ್ಲಿ ಅತ್ಯಂತ ಜನಪ್ರೀಯ ಕ್ರಿಕೆಟಿಗ. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅದ್ಬುತ ಪ್ರದರ್ಶನ ನೀಡಿರುವ ಎಬಿಡಿ ಕಳೆದ ಐಪಿಎಲ್ ಟೂರ್ನಿ ಬೆನ್ನಲ್ಲೇ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಐಪಿಎಲ್ ಹಾಗೂ ಇತರ ಲೀಗ್ ಟೂರ್ನಿ ಆಡೋ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಿರಲಿಲ್ಲ. ಸೌತ್ಆಫ್ರಿಕಾ ದೇಸಿ ಲೀಗ್ ಹೊರತು ಪಡಿಸಿ ಇತರ ಲೀಗ್ ಆಡೋ ಸಾಧ್ಯತೆ ಕಡಿಮೆ ಎಂದಿದ್ದರು. ಇದೀಗ ಡಿವಿಲಿಯರ್ಸ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

2019ರ ಐಪಿಎಲ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಪರ ಆಡಲಿದ್ದಾರೆ ಎಂದು ಆರ್‌ಸಿಬಿ ಚೇರ್ಮೆನ್ ಸಂಜೀವ್ ಚುರಿವಾಲ ಹೇಳಿದ್ದಾರೆ. ಈ ಮೂಲಕ ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಎಬಿಡಿ, 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡರು. ಬಳಿಕ ಆರ್‌ಸಿಬಿ ತಂಡ ಸ್ಟಾರ್ ಪ್ಲೇಯರ್ ಆಗಿ ಮಿಂಚಿದ್ದಾರೆ.

ಮೇ 23, 2018ರಂದು ಎಬಿ ಡಿವಿಲಿಯರ್ಸ್ ದಿಢೀರ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದರು. ಎಬಿಡಿ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ತಂದಿತ್ತು. ಜೊತೆಗೆ ಮುಂದಿನ ಐಪಿಎಲ್ ಆಡೋ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡಿರಲಿಲ್ಲ. ಇದೀಗ ಎಬಿಡಿ ನಿರ್ಧಾರದಿಂದ ಆರ್‌ಸಿಬಿ ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದಾರೆ.

loader