ಮುಂಬೈ(ಏ.03): ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಹೊಸ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಲೀಗ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾಧವ್ ವಿಕೆಟ್ ಕಬಳಿಸೋ ಮೂಲಕ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: IPL 2019: CSKಗೆ 171 ರನ್ ಟಾರ್ಗೆಟ್ ನೀಡಿದ ಮುಂಬೈ

 

 

ಐಪಿಎಲ್ ಟೂರ್ನಿಯಲ್ಲಿ ಒಟ್ಟು 126 ಪಂದ್ಯ ಆಡಿರುವ ಬ್ರಾವೋ 143 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ CSK ಒಂದರ ಪರವಾಗಿ 100 ವಿಕೆಟ್ ಕಬಳಿಸಿದ್ದಾರೆ.  ಈ ಮೂಲಕ  CSK ಪರ ನೂರು ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ಸಾಧನೆ ಮಾಡಿದ್ದಾರೆ.