ಬೆಂಗಳೂರು(ಮಾ.20): 12ನೇ ಆವೃತ್ತಿಯಲ್ಲಿಐಪಿಎಲ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಸಜ್ಜಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವ RCB ತಂಡದ ಆಯ್ಕೆಗೆ ಅಂತಿಮ ಕಸರತ್ತು ನಡೆಸುತ್ತಿದೆ. ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ RCB ತಂಡಕ್ಕೆ ಡೆತ್ ಬೌಲಿಂಗ್ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಈ ಆವೃತ್ತಿಯಲ್ಲಿ ಇದಕ್ಕೆ ಉತ್ತರ ಸಿಗೋ ಸಾಧ್ಯತೆಗಳಿವೆ.

ಇದನ್ನೂ ಓದಿ: ಕೊಹ್ಲಿ, ABD ಹೊರತು ಪಡಿಸಿದ್ರೆ RCBಯಲ್ಲಿದ್ದಾರೆ ಮೂವರು ಗೇಮ್ ಚೇಂಜರ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 6 ವೇಗಿಗಳಿದ್ದಾರೆ. ಇಬ್ಬರು ಪ್ರಮುಖ ವಿದೇಶಿ ವೇಗಿಗಳು RCB ತಂಡದ ಬಲ ಹೆಚ್ಚಿಸಿದೆ.   ನೌಥನ್ ಕೌಲ್ಟರ್ ನೈಲ್, ಟಿಮ್ ಸೌಥಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಕುಲ್ವಂತ್ ಕೆಜ್ರೋಲಿಯಾ ಒಟ್ಟು 6 ವೇಗಿಗಳು RCB ಬೌಲಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇದರಲ್ಲಿ ಒರ್ವ ವಿದೇಶಿ ಹಾಗೂ ಇನ್ನಿಬ್ಬರು ಭಾರತೀಯ ವೇಗಿಗಳು ಆಡೋ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ 6 ವೇಗಿಗಳ ಪೈಕಿ ಮೂವರು ವೇಗಿಗಳು ಟಿ20 ಎಕಾನಮಿ ರೇಟಿಂಗ್ ಕೊಂಚ ಸಮಾಧಾನ ತರುವಂತಿದೆ.

ಇದನ್ನೂ ಓದಿ: IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

RCB ಡೆತ್ ಬೌಲರ್ಸ್:

ಬೌಲರ್ಸ್ ಎಕಾನಮಿ
ನಥನ್ ಕೌಲ್ಟರ್ ನೈಲ್ 7.79
ಉಮೇಶ್ ಯಾದವ್ 8.20
ಟಿಮ್ ಸೌಥಿ 8.29