2019ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಮುಂಬೈ ಇಂಡಿಯನ್ಸ್ ಆಟಗಾರರ ರಿಟೈನ್ ಹಾಗೂ ರಿಲೀಸ್ ಮಾಡುವಲ್ಲಿ 2 ತಪ್ಪು ಮಾಡಿದೆ. ಅಷ್ಟಕ್ಕೂ ಬಲಿಷ್ಠ ಮುಂಬೈ ಇಂಡಿಯನ್ಸ್ ಮಾಡಿದ ತಪ್ಪೇನು? ಇಲ್ಲಿದೆ ವಿವರ. 

ಮುಂಬೈ(ನ.20): ಐಪಿಎಲ್ ಟೂರ್ನಿ ಹರಾಜಿನಲ್ಲಿ ಹೊಸ ಆಟಗಾರರ ಖರೀದಿಗೆ ಮುಂದಾಗಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿನ ಕೆಲ ಆಟಗಾರರನ್ನ ಕೈಬಿಟ್ಟಿದೆ. 2019ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಮುಂಬೈ ಇಂಡಿಯನ್ಸ್ ಎರಡು ತಪ್ಪು ಮಾಡಿದೆ ಅನ್ನೋ ಮಾತುಗಳು ಕೇಳಿಬಂದಿದೆ.

Add Asianetnews Kannada as a Preferred SourcegooglePreferred

ತಂಡದ ಆಟಗಾರರನ್ನ ರಿಲೀಸ್ ಹಾಗೂ ರಿಟೈನ್ ಮಾಡಿಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ 2 ತಪ್ಪು ಮಾಡಿದೆ. ಮೊದಲ ತಪ್ಪು ಕೀರನ್ ಪೊಲಾರ್ಡ್ ಅವರನ್ನ ತಂಡ ಉಳಿಸಿಕೊಂಡಿರುವುದು. ಕಳಪೆ ಫಾರ್ಮ್‌ನಲ್ಲಿರುವ ಕೀರನ್ ಪೊಲಾರ್ಡ್ ಕಳೆದ ಕೆಲ ಆವೃತ್ತಿಗಳಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಮುಂಬೈ ತಂಡದ ಹಲವು ಸೋಲಿಗೆ ತಂಡದ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ವೈಫಲ್ಯ ಕಾರಣವಾಗಿತ್ತು. 

ಮುಂಬೈ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಕೀರನ್ ಪೊಲಾರ್ಡ್ ಇತ್ತೀಚೆಗೆ ಭಾರತ ವಿರುದ್ಧದ ಸರಣಿಯಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ಕೀರನ್ ಪೊಲಾರ್ಡ್ ಅವರನ್ನ ತಂಡದಲ್ಲೇ ಉಳಿಸಿಕೊಂಡಿದೆ.

ಪೊಲಾರ್ಡ್‌ರನ್ನ ತಂಡದಲ್ಲೇ ಉಳಿಸಿಕೊಂಡ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಜೆಪಿ ಡುಮಿನಿ ಅವರನ್ನ ಕೈಬಿಟ್ಟಿದೆ. ಸದ್ಯ ಡುಮಿನಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪೊಲಾರ್ಡ್‌ಗಿಂತ ಡುಮಿನಿಯನ್ನ ಉಳಿಸಿಕೊಳ್ಳುವುದು ಸೂಕ್ತವಾಗಿತ್ತು.