ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಟಾಸ್ ಗೆದ್ದಿರುವ ಪಂಜಾಬ್  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು? ಇಲ್ಲಿದೆ.

ಮೊಹಾಲಿ(ಏ.08): ಐಎಸ್ ಬಿಂದ್ರಾ ಕ್ರೀಡಾಗಣದಲ್ಲಿಂದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿದೆ. ಈಗಾಗಲೇ ಟಾಸ್ ಗೆದ್ದಿರುವ ಪಂಜಾಬ್ಫೀ ಲ್ಡಿಂಗ್ ಆಯ್ಕೆ ಮಾಡಿದೆ. ಕಳೆದ ಪಂದ್ಯದಲ್ಲಿ ಸೋಲಿನ ತೆಕ್ಕೆಗೆ ಜಾರಿರುವ ಉಭಯ ತಂಡಗಳು ಇದೀಗ ಗೆಲುವಿಗಾಗಿ ಹೋರಾಟ ನಡೆಸಲಿದೆ. ಪಂಜಾಬ್ ತಂಡದಲ್ಲಿ 2 ಬದಲಾವಣೆ ಮಾಡಿದ್ದರೆ, ಹೈದರಾಬಾದ್ ಯಾವುದೇ ಬದಲಾವಣೆ ಮಾಡಿಲ್ಲ. ಮಜೀಬ್ ಯಆರ್ ರಹೆಮಾನ್ ಹಾಗೂ ಅಂಕಿತ್ ರಜಪೂತ್ ತಂಡ ಸೇರಿಕೊಂಡಿದ್ದಾರೆ.

Scroll to load tweet…

ಇದನ್ನೂ ಓದಿ: ಸೋತರೂ ಡೆಲ್ಲಿ ಜತೆಗೆ ನಂ.1 ಸ್ಥಾನ ಹಂಚಿಕೊಂಡ RCB..!

ತವರಿನಲ್ಲಿ ಕಣಕ್ಕಿಳಿದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಡಿದ 5 ಪಂದ್ಯದಲ್ಲಿ 3 ರಲ್ಲಿ ಗೆಲುವು ಹಾಗೂ 2 ರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಹೈದರಾಬಾದ್ ಕೂಡ ಅಡಿದ 5 ಪಂದ್ಯದಲ್ಲಿ 3 ಗೆಲುವು ಸಾಧಿಸಿದೆ. ಆದರೆ ನೆಟ್ ರನ್‌ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದೆ.