ಕೋಲ್ಕತಾ(ಏ.28): ಸತತ 6 ಸೋಲಿನಿಂದ ಕಂಗೆಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್ ಇದೀಗ ಮುಂಬೈ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ 47ನೇ ಲೀಗ್ ಪಂದ್ಯದಲ್ಲಿ ಕೆಕೆಆರ್ ವಿಕೆಟ್ 2 ನಷ್ಟಕ್ಕೆ 232 ರನ್ ಸಿಡಿಸಿದೆ. ಇದೀಗ ಮುಂಬೈ ಗೆಲುವಿಗೆ 233 ರನ್ ಸಿಡಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತಾ ನೈಟ್ ರೈಡರ್ಸ್ ಭರ್ಜರಿ ಆರಂಭ ಪಡೆಯಿತು. ಶುಭಮಾನ್ ಗಿಲ್ ಹಾಗೂ ಕ್ರಿಸ್ ಲಿನ್ ಮೊದಲ ವಿಕೆಟ್‌ಗೆ 96 ರನ್ ಜೊತೆಯಾಟ ನೀಡಿದರು. ಅರ್ಧಶತಕ ಸಿಡಿಸಿದ ಕ್ರಿಸ್ ಲಿನ್ 54 ರನ್ ಬಾರಿಸಿ ಔಟಾದರು. ಅಬ್ಬರಿಸಿದ ಶುಭ್‌ಮಾನ್ ಗಿಲ್ 45 ಎಸೆತದಲ್ಲಿ 76 ರನ್ ಸಿಡಿಸಿ ಔಟಾದರು.

ಆ್ಯಂಡ್ರೆ ರಸೆಲ್ ಹಾಗೂ ನಾಯಕ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ 200 ರನ್ ಗಡಿ ದಾಟಿತು. ರಸೆಲ್ 40 ಎಸೆತದಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ ಅಜೇಯ 80 ರನ್ ಸಿಡಿಸಿದರು. ಇನ್ನು ಕಾರ್ತಿಕ್ ಅಜೇಯ 15 ರನ್ ಸಿಡಿಸಿದರು.  ಈ ಮೂಲಕ ಕೆಕೆಆರ್ 2 ವಿಕೆಟ್ 232 ನಷ್ಟಕ್ಕೆ ರನ್  ಸಿಡಿಸಿತು.