ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಹೋರಾಟ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಪಂದ್ಯದಲ್ಲಿ CSK ಸೋಲು ಅನುಭವಿಸಿದ್ದರೆ, ಪಂಜಾಬ್ ಗೆಲುವಿನ ಅಲೆಯಲ್ಲಿದೆ. ಇದೀಗ ಟಾಸ್ ಗೆದ್ದಿರುವ CSK ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.
ಚೆನ್ನೈ(ಏ.06): ಐಪಿಎಲ್ ಟೂರ್ನಿಯಲ್ಲಿಂದು ಎರಡು ಪಂದ್ಯ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಹೋರಾಟ ನಡೆಸಲಿದೆ. ಈಗಾಗಲೇ ಟಾಸ್ ಗೆದ್ದಿರುವ CSK KXIP ಬ್ಯಾಟಿಂಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಗೆಲುವಿನ ಅಲೆಯಲ್ಲಿದ್ದ ಚೆನ್ನೈ ತಂಡಕ್ಕೆ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಶಾಕ್ ನೀಡಿತ್ತು. ಇದೀಗ ಗೆಲುವಿನ ಲಯಕ್ಕೆ ಮರಳೋ ವಿಶ್ವಾಸದಲ್ಲಿದೆ. ಇದೀಗ ಚೆನ್ನೈ ಇಂದಿನ ಪಂದ್ಯಕ್ಕೆ 3 ಬದಲಾವಣೆ ಮಾಡಿದೆ.
ಇದನ್ನೂ ಓದಿ: 205 ರನ್ ಸಿಡಿಸಿ, 7 ಬೌಲರ್ ಇದ್ರೂ ರಸೆಲ್ ಸುನಾಮಿಗೆ ಕೊಚ್ಚಿ ಹೋಯ್ತು RCB
ಮೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್ ಹಾಗೂ ಡ್ವೇನ್ ಬ್ರಾವೋಗೆ ರೆಸ್ಟ್ ನೀಡಲಾಗಿದೆ. ಇವರ ಬದಲು ಸ್ಕಾಟ್ ಕಗ್ಲಿಜಿನ್, ಹರ್ಭಜನ್ ಸಿಂಗ್ ಹಾಗೂ ಫಾಫ್ ಡುಪ್ಲೆಸಿಸ್ ತಂಡಕ್ಕೆ ಮರಳಿದ್ದಾರೆ. ಇನ್ನು ಪಂಜಾಬ್ ತಂಡದಲ್ಲಿ 2 ಬದಲಾವಣೆ ಮಾಡಿದ್ದು ಕ್ರಿಸ್ ಗೇಲ್ ಹಾಗೂ ಆಂಡ್ರ್ಯೂ ಟೈ ತಂಡಕ್ಕೆ ಮರಳಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿದ 4 ಪಂದ್ಯಗಳಲ್ಲಿ 3 ಗೆಲುವು ಹಾಗೂ 1 ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಚೆನ್ನೈ ಕೂಡ 4 ರಲ್ಲಿ 3 ಗೆಲವು ಸಾಧಿಸಿದೆ. ಇದೀಗ ಬಲಿಷ್ಠ ತಂಡಗಳ ನಡುವಿನ ಹೋರಾಟ ಕುತೂಹಲ ಕೆರಳಿಸಿದೆ.
