Asianet Suvarna News Asianet Suvarna News

IPL 2018: ಪ್ರತಿ ತಂಡದಲ್ಲೂ ಕೆಟ್ಟ ಪ್ರದರ್ಶನ ತೋರಿದ ಆಟಗಾರರಿವರು..!

8 ತಂಡಗಳ ಕೆಲ ಆಟಗಾರರು ಏಕಾಂಗಿಯಾಗಿ ಹೋರಾಡಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರೆ, ಇನ್ನು ಕೆಲ ಆಟಗಾರರು ಪದೇ ಪದೇ ವಿಫಲವಾಗುವ ಮೂಲಕ ಪ್ರಾಂಚೈಸಿಗಳು ತಮ್ಮ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸಿದರು. ಪ್ರತಿ ತಂಡದಲ್ಲೂ ಈ ಬಾರಿಯ ಐಪಿಎಲ್’ನಲ್ಲಿ ಕೆಟ್ಟ ಪ್ರದರ್ಶನ ತೋರಿದ ಆಟಗಾರರ ಪಟ್ಟಿ ನಿಮ್ಮ ಮುಂದೆ..

IPL 2018 Worst players from each team

ಬೆಂಗಳೂರು[ಜೂ.05]: 11ನೇ ಆವೃತ್ತಿ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮುವ ಮೂಲಕ 2 ತಿಂಗಳು ಕಾಲ ಜರುಗಿದ ಚುಟುಕು ಅಭಿಯಾನ ಅಂತ್ಯಗೊಂಡಿದೆ. ಧೋನಿ ನೇತೃತ್ವದ ಸಿಎಸ್’ಕೆ ಮೂರನೇ ಬಾರಿಗೆ ಕಪ್’ಗೆ ಮುತ್ತಿಕ್ಕಿದರೆ, ಆರ್’ಸಿಬಿ, ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ.
8 ತಂಡಗಳ ಕೆಲ ಆಟಗಾರರು ಏಕಾಂಗಿಯಾಗಿ ಹೋರಾಡಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರೆ, ಇನ್ನು ಕೆಲ ಆಟಗಾರರು ಪದೇ ಪದೇ ವಿಫಲವಾಗುವ ಮೂಲಕ ಪ್ರಾಂಚೈಸಿಗಳು ತಮ್ಮ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸಿದರು. ಪ್ರತಿ ತಂಡದಲ್ಲೂ ಈ ಬಾರಿಯ ಐಪಿಎಲ್’ನಲ್ಲಿ ಕೆಟ್ಟ ಪ್ರದರ್ಶನ ತೋರಿದ ಆಟಗಾರರ ಪಟ್ಟಿ ನಿಮ್ಮ ಮುಂದೆ..
#1. ರವೀಂದ್ರ ಜಡೇಜಾ[ಚೆನ್ನೈ ಸೂಪರ್’ಕಿಂಗ್ಸ್]

IPL 2018 Worst players from each team
ಆಲ್ರೌಂಡರ್ ರವೀಂದ್ರ ಜಡೇಜಾ ಮೇಲೆ ಸಿಎಸ್’ಕೆ ಪ್ರಾಂಚೈಸಿ ಹಾಗೂ ನಾಯಕ ಧೋನಿ ಸಾಕಷ್ಟು ನಿರೀಕ್ಷೆಯಿಟ್ಟಿದ್ದರು. ಜಡೇಜಾ ಕೇವಲ 17ರ ಸರಾಸರಿಯಲ್ಲಿ 89 ರನ್ ಮಾತ್ರ ಬಾರಿಸಿದ್ದರು. ಇನ್ನು ಬೌಲಿಂಗ್’ನಲ್ಲಿ ಕಬಳಿಸಿದ್ದು ಕೇವಲ 11 ಮಾತ್ರ. ಅದರಲ್ಲೂ ಮೊದಲ 11 ಪಂದ್ಯಗಳಲ್ಲಿ ಜಡೇಜಾ ಕಬಳಿಸಿದ್ದು ಕೇವಲ 4 ವಿಕೆಟ್’ಗಳು ಮಾತ್ರ.
#2. ಗ್ಲೇನ್ ಮ್ಯಾಕ್ಸ್’ವೆಲ್[ಡೆಲ್ಲಿ ಡೇರ್’ಡೆವಿಲ್ಸ್]

IPL 2018 Worst players from each team
ಡೆಲ್ಲಿ ಡೇರ್’ಡೆವಿಲ್ಸ್ ತಂಡ ಆಸೀಸ್ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್’ವೆಲ್’ರನ್ನು 9 ಕೋಟಿ ರುಪಾಯಿ ನೀಡಿ ಖರೀದಿಸಿತು. ಆದರೆ ಮ್ಯಾಕ್ಸ್’ವೆಲ್ ಮಾತ್ರ ತೀರಾ ಕಳಪೆ ಪ್ರದರ್ಶನ ತೋರುವ ಮೂಲಕ ನಿರಾಸೆ ಮೂಡಿಸಿದರು. ಮ್ಯಾಕ್ಸ್’ವೆಲ್ ಆಡಿದ 12 ಪಂದ್ಯಗಳಲ್ಲಿ ಕೇವಲ 169 ರನ್ ಬಾರಿಸಿದರೆ, ಬೌಲಿಂಗ್’ನಲ್ಲಿ ಕಬಳಿಸಿದ್ದು ಕೇವಲ 5 ವಿಕೆಟ್ ಮಾತ್ರ
#3. ಮೋಹಿತ್ ಶರ್ಮಾ[ಕಿಂಗ್ಸ್ ಇಲೆವನ್ ಪಂಜಾಬ್]

IPL 2018 Worst players from each team
ಆರಂಭದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಉತ್ತಮ ಪ್ರದರ್ಶನ ತೋರಿದರೂ ದ್ವಿತಿಯಾರ್ಧದಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್ ಪ್ರವೇಶಿಸುವ ಮುನ್ನವೇ ಟೂರ್ನಿಯಿಂದ ಹೊರಬಿದ್ದಿತು. ಹಾಗೆ ಕಳಪೆ ಆಟಗಾರರ ಹೆಸರುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಮಯಾಂಕ್ ಅಗರ್’ವಾಲ್, ಕರುಣ್ ನಾಯರ್, ಆ್ಯರೋನ್ ಫಿಂಚ್, ಯುವರಾಜ್ ಸಿಂಗ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಕಿಂಗ್ಸ್ ಇಲೆವನ್ ಪಂಜಾಬ್ ಆರ್’ಟಿಎಂ ಕಾರ್ಡ್ ಬಳಸಿ ಮೋಹಿತ್ ಶರ್ಮಾ ಅವರನ್ನು ಉಳಿಸಿಕೊಂಡಿತ್ತು. ಆದರೆ ಮೋಹಿತ್ ಶರ್ಮಾ ಆಡಿದ 9 ಪಂದ್ಯಗಳಲ್ಲಿ ಕಬಳಿಸಿದ್ದು ಕೇವಲ 7 ವಿಕೆಟ್ ಮಾತ್ರ. ಡೆತ್ ಓವರ್’ಗಳಲ್ಲಂತೂ ಮೋಹಿತ್ 11.2ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿದರು.
#4. ಮಿಚೆಲ್ ಜಾನ್ಸನ್[ಕೋಲ್ಕತಾ ನೈಟ್’ರೈಡರ್ಸ್] 

IPL 2018 Worst players from each team
ಬಿಗ್ ಬ್ಯಾಷ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿ ಕೆಕೆಆರ್ ತಂಡ ಕೋಡಿಕೊಂಡಿದ್ದ ಆಸೀಸ್ ವೇಗಿ ಮಿಚೆಲ್ ಜಾನ್ಸನ್ ಆಡಿದ 6 ಪಂದ್ಯಗಳಲ್ಲಿ ಜಾನ್ಸನ್ ಕಬಳಿಸಿದ ವಿಕೆಟ್’ಗಳ ಸಂಖ್ಯೆ ಕೇವಲ 2 ಮಾತ್ರ. 
#5. ರೋಹಿತ್ ಶರ್ಮಾ[ಮುಂಬೈ ಇಂಡಿಯನ್ಸ್]

IPL 2018 Worst players from each team
ಮುಂಬೈ ಇಂಡಿಯನ್ಸ್ ತಂಡದಲ್ಲಿ ಈ ಬಾರಿ ಇಶಾನ್ ಕಿಶನ್, ಮಯಾಂಕ್ ಮಾರ್ಕಂಡೆ, ಸೂರ್ಯಕುಮಾರ್ ಯಾದವ್ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರೆ ನಾಯಕ ರೋಹಿತ್ ಶರ್ಮಾ ಮಾತ್ರ ಕಳಪೆ ಪ್ರದರ್ಶನ ತೋರುವ ಮೂಲಕ ನಿರಾಸೆ ಅನುಭವಿಸಿದರು. ಆಡಿದ 14 ಪಂದ್ಯಗಳಲ್ಲಿ 2 ಅರ್ಧಶತಕ ಹೊರತುಪಡಿಸಿ ರೋಹಿತ್ ಗಳಿಸಿದ್ದು ಕೇವಲ 286 ರನ್ ಮಾತ್ರ. ರೋಹಿತ್ ಕಳಪೆ ಪ್ರದರ್ಶನದಿಂದಾಗಿ 2017 ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಯಿತು.
#6. ಡೋರ್ಸಿ ಶಾರ್ಟ್[ರಾಜಸ್ಥಾನ ರಾಯಲ್ಸ್]

IPL 2018 Worst players from each team
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬಿಗ್ ಬ್ಯಾಷ್ ಟೂರ್ನಿಯಲ್ಲಿ ತೋರಿದ ಪ್ರದರ್ಶನವನ್ನು ಮರುಕಳಿಸುವಲ್ಲಿ ಡೋರ್ಸಿ ಶಾರ್ಟ್ ಈ ಬಾರಿಯ ಐಪಿಎಲ್’ನಲ್ಲಿ ವಿಫಲವಾದರು. ಆಡಿದ 7 ಪಂದ್ಯಗಳಲ್ಲಿ ಕೇವಲ 16.42ರ ಸರಾಸರಿಯಲ್ಲಿ ಕಲೆಹಾಕಿದ್ದು ಕೇವಲ 115 ರನ್’ಗಳು ಮಾತ್ರ. ಬಿಗ್ ಬ್ಯಾಷ್ ಟೂರ್ನಿಯಲ್ಲಿ 151ರ ಸ್ಟ್ರೈಕ್ ರೇಟ್ ಹೊಂದಿದ್ದ ಶಾರ್ಟ್, 100 ಎಸೆತಗಳನ್ನು ಎದುರಿಸಿ 116 ರನ್’ಗಳನನಷ್ಟೇ ಬಾರಿಸಿ ನಿರಾಸೆ ಅನುಭವಿಸಿದ್ದರು.
#7. ಸರ್ಫರಾಜ್ ಖಾನ್[ರಾಯಲ್ ಚಾಲೆಂಜರ್ಸ್ ಬೆಂಗಳೂರು]

IPL 2018 Worst players from each team
ಕನ್ನಡಿಗ ಕೆ.ಎಲ್ ರಾಹುಕ್ ಅವರನ್ನು ಕೈಬಿಟ್ಟು ಆರ್’ಸಿಬಿ ಸರ್ಫರಾಜ್ ಖಾನ್ ಅವರನ್ನು ರೀಟೈನ್ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಇಲ್ಲೀವರೆಗೂ ಉತ್ತರ ಸಿಕ್ಕಿಲ್ಲ. ಆರ್’ಸಿಬಿ ಪರ ಸರ್ಫರಾಜ್ ಖಾನ್ ಆಡಿದ 6 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 51 ರನ್’ಗಳು ಮಾತ್ರ. 
#8. ಮನೀಶ್ ಪಾಂಡೆ[ಸನ್’ರೈರಸ್ ಹೈದರಾಬಾದ್]

IPL 2018 Worst players from each team
ಆಟಗಾರರ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸನ್’ರೈಸರ್ಸ್ ಹೈದರಾಬಾದ್ ತಂಡ ಕೂಡಿಕೊಂಡಿದ್ದ ಮನೀಶ್ ಪಾಂಡೆ ಆಡಿದ 12 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 284 ರನ್ ಮಾತ್ರ. ಆರ್’ಸಿಬಿ ವಿರುದ್ಧ ಅಜೇಯ ಅರ್ಧಶತಕ[62*] ಸಿಡಿಸಿದ್ದು ಬಿಟ್ಟರೆ ಮನೀಶ್’ರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಹೀಗಾಗಿಯೇ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

Follow Us:
Download App:
  • android
  • ios