ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಕೆಕೆಆರ್ ಅಭಿಮಾನಿಗಳು ವಿನಯ್ ಕುಮಾರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದಾದ ಬಳಿಕ ಟೀಕಾಕಾರರಿಗೆ ವಿನಯ್ ಕುಮಾರ್ ಟ್ವೀಟ್'ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲ್ಕತ ನೈಟ್'ರೈಡರ್ಸ್ ವೇಗದ ಬೌಲರ್ ವಿನಯ್ ಕುಮಾರ್ ನಿನ್ನೆ ನಡೆದ ಸಿಎಸ್'ಕೆ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಅಂತಿಮ ಓವರ್'ನಲ್ಲಿ 17 ರನ್'ಗಳನ್ನು ರಕ್ಷಿಸಿಕೊಳ್ಳಲು ವಿಫಲವಾದ ವಿನಯ್ ಕುಮಾರ್ ಮೇಲೆ ಕೆಕೆಆರ್ ಕ್ರಿಕೆಟ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಚೆನ್ನೈ ಸೂಪರ್'ಕಿಂಗ್ಸ್ ತಂಡವು ಕೊನೆಯ ಓವರ್'ನಲ್ಲಿ ಗೆಲ್ಲಲು 17 ರನ್'ಗಳ ಅವಶ್ಯಕತೆಯಿತ್ತು. ಕೊನೆಯ ಓವರ್'ನ ಬೌಲಿಂಗ್ ಮಾಡಿದ ವಿನಯ್ ಮೊದಲ ಎಸೆತದಲ್ಲೇ ನೋಬಾಲ್ ಹಾಕಿ ಸಿಕ್ಸರ್ ಬಿಟ್ಟುಕೊಟ್ಟರು. ಕೊನೆಯ ಎರಡು ಎಸೆತದಲ್ಲಿ ಸಿಎಸ್'ಕೆಗೆ ಗೆಲ್ಲಲು 4 ರನ್'ಗಳ ಅವಶ್ಯಕತೆಯಿತ್ತು. ಆಗ ರವೀಂದ್ರ ಜಡೇಜಾ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಕೆಕೆಆರ್ ಅಭಿಮಾನಿಗಳು ವಿನಯ್ ಕುಮಾರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದಾದ ಬಳಿಕ ಟೀಕಾಕಾರರಿಗೆ ವಿನಯ್ ಕುಮಾರ್ ಟ್ವೀಟ್'ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
ಇದೊಂದು ಪಂದ್ಯವಷ್ಟೇ ಹಾಗಾಗಿ ಇರ್ಲಿ ಬಿಡಿ. ನಾನು ಆರ್'ಸಿಬಿ ವಿರುದ್ಧ 9 ರನ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್'ಗಳನ್ನು ಡಿಫೆಂಡ್ ಮಾಡಿಕೊಂಡಾಗ ನೀವೆಲ್ಲಿ ಹೋಗಿದ್ರಿ. ಕೆಲವೊಮ್ಮೆ ತಪ್ಪುಗಳಾಗುತ್ತವೆ ಎಂದು ಟ್ವೀಟ್ ಮಾಡುವ ಮೂಲಕ ಟೀಕಾಕಾರರಿಗೆ ಸರಿಯಾಗಿಯೇ ಉತ್ತರಕೊಟ್ಟಿದ್ದಾರೆ.