Asianet Suvarna News Asianet Suvarna News

IPL 2018: ಡೆವಿಲ್ಸ್’ಗಿಂದು ಮತ್ತೊಂದು ಕಠಿಣ ಸವಾಲು

ಪ್ಲೇ-ಆಫ್‌’ಗೇರಬೇಕಿದ್ದರೆ ಡೆಲ್ಲಿ ಉಳಿದಿರುವ ಎಲ್ಲಾ 5 ಪಂದ್ಯಗಳಲ್ಲೂ ಗೆಲ್ಲಲೇಬೇಕಿದೆ. ಮತ್ತೊಂದೆಡೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಸನ್’ರೈಸರ್ಸ್‌, ಡೆಲ್ಲಿ ಓಟಕ್ಕೆ ಕಡಿವಾಣ ಹಾಕಿ ಟೂರ್ನಿಯಿಂದ ಹೊರದಬ್ಬಲು ಕಾಯುತ್ತಿದೆ.

IPL 2018 Resurgent DD face SRH test

ಹೈದರಾಬಾದ್(ಮೇ.05]: ಯುವ ಬ್ಯಾಟ್ಸ್‌’ಮನ್‌’ಗಳ ಅಬ್ಬರದಿಂದ ಐಪಿಎಲ್ ಪ್ಲೇ-ಆಫ್ ರೇಸ್‌’ನಲ್ಲಿ ಉಳಿದುಕೊಂಡಿರುವ ಡೆಲ್ಲಿ ಡೇರ್ ಡೆವಿಲ್ಸ್, ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬಲಿಷ್ಠ ಸನ್‌’ರೈಸರ್ಸ್‌ ಹೈದರಾಬಾದ್ ವಿರುದ್ಧ ಹೋರಾಡಲಿದೆ. 

ಪ್ಲೇ-ಆಫ್‌’ಗೇರಬೇಕಿದ್ದರೆ ಡೆಲ್ಲಿ ಉಳಿದಿರುವ ಎಲ್ಲಾ 5 ಪಂದ್ಯಗಳಲ್ಲೂ ಗೆಲ್ಲಲೇಬೇಕಿದೆ. ಮತ್ತೊಂದೆಡೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಸನ್’ರೈಸರ್ಸ್‌, ಡೆಲ್ಲಿ ಓಟಕ್ಕೆ ಕಡಿವಾಣ ಹಾಕಿ ಟೂರ್ನಿಯಿಂದ ಹೊರದಬ್ಬಲು ಕಾಯುತ್ತಿದೆ. ಡೆಲ್ಲಿ ತನ್ನ ಯುವ ಬ್ಯಾಟಿಂಗ್ ಪಡೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದರೆ, ಸನ್‌’ರೈಸರ್ಸ್‌ ತನ್ನ ಬಲಿಷ್ಠ ಬೌಲಿಂಗ್ ಪಡೆಯ ಮೇಲೆ ಅವಲಂಬಿತಗೊಂಡಿದೆ.

ಪೃಥ್ವಿ, ಶ್ರೇಯಸ್, ರಿಶಭ್ ಹಾಗೂ ರೈಸರ್ಸ್‌ ಬೌಲರ್‌ಗಳ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ. 

ಪಂದ್ಯ ಆರಂಭ: ಸಂಜೆ 8 ಗಂಟೆಗೆ

Follow Us:
Download App:
  • android
  • ios