ಅತ್ಯುತ್ತಮ ನೆಟ್ ರನ್‌’ರೇಟ್ ಹೊಂದಿರುವ ಮುಂಬೈ ಈ ಪಂದ್ಯದಲ್ಲಿ ಜಯಿಸಿದರೆ ತಂಡಕ್ಕೆ ಪ್ಲೇ-ಆಫ್‌’ಗೇರಲು ಇನ್ನೂ ಅವಕಾಶವಿರಲಿದೆ. ಕಿಂಗ್ಸ್ ಇಲೆವೆನ್ ಗೆದ್ದ ಪಕ್ಷದಲ್ಲಿ ಪ್ಲೇ-ಆಫ್ ಲೆಕ್ಕಾಚಾರ ಬದಲಾಗಿದೆ. 

ಮುಂಬೈ[ಮೇ.16]: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಮುಖಾಮುಖಿಯಾಗಲಿದ್ದು, ಪ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ಕಾತರಿಸುತ್ತಿವೆ.

ಎರಡೂ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆರಂಭದಲ್ಲಿ ಸತತ ಸೋಲು ಅನುಭವಿಸಿದ ಮುಂಬೈ, ಹ್ಯಾಟ್ರಿಕ್ ಗೆಲುವು ಸಾಧಿಸಿ ಪುಟಿದೆದ್ದಿತ್ತು. ಆದರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಸೋಲುಂಡ ತಂಡ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ. 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ಮುಂಬೈ 6ನೇ ಸ್ಥಾನದಲ್ಲಿದ್ದರೆ, ಕಿಂಗ್ಸ್ ಇಲೆವೆನ್ 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. 

ಅತ್ಯುತ್ತಮ ನೆಟ್ ರನ್‌’ರೇಟ್ ಹೊಂದಿರುವ ಮುಂಬೈ ಈ ಪಂದ್ಯದಲ್ಲಿ ಜಯಿಸಿದರೆ ತಂಡಕ್ಕೆ ಪ್ಲೇ-ಆಫ್‌’ಗೇರಲು ಇನ್ನೂ ಅವಕಾಶವಿರಲಿದೆ. ಕಿಂಗ್ಸ್ ಇಲೆವೆನ್ ಗೆದ್ದ ಪಕ್ಷದಲ್ಲಿ ಪ್ಲೇ-ಆಫ್ ಲೆಕ್ಕಾಚಾರ ಬದಲಾಗಿದೆ.