Asianet Suvarna News Asianet Suvarna News

IPL ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ: ಬದ್ಧವೈರಿಗಳ ಕಾದಾಟಕ್ಕೆ ವಾಂಖೇಡೆ ಮೈದಾನ ರೆಡಿ

ಇಲ್ಲಿನ ವಾಂಖೇಡೆ ಕ್ರೀಡಾಂಗಣ ಈ ಆವೃತ್ತಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಅದ್ಧೂರಿ ಉದ್ಘಾಟನಾ ಸಮಾರಂಭದ ಬಳಿಕ ನಡೆಯಲಿರುವ ಪಂದ್ಯ, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಸಿಎಸ್‌'ಕೆ ಹಾಗೂ ಮುಂಬೈ ಬದ್ಧ ವೈರಿಗಳಾಗಿದ್ದು ಶುಭಾರಂಭದ ನಿರೀಕ್ಷೆಯಲ್ಲಿವೆ.

IPL 2018 Holders Mumbai Indians take on resurrected Chennai Super Kings

ಮುಂಬೈ(ಏ.07): 3 ಬಾರಿ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ 11ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ 2 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.

ಇಲ್ಲಿನ ವಾಂಖೇಡೆ ಕ್ರೀಡಾಂಗಣ ಈ ಆವೃತ್ತಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಅದ್ಧೂರಿ ಉದ್ಘಾಟನಾ ಸಮಾರಂಭದ ಬಳಿಕ ನಡೆಯಲಿರುವ ಪಂದ್ಯ, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಸಿಎಸ್‌'ಕೆ ಹಾಗೂ ಮುಂಬೈ ಬದ್ಧ ವೈರಿಗಳಾಗಿದ್ದು ಶುಭಾರಂಭದ ನಿರೀಕ್ಷೆಯಲ್ಲಿವೆ.

10 ವರ್ಷಗಳ ಮುಂಬೈ ತಂಡದಲ್ಲಿದ್ದ ಹರ್ಭಜನ್ ಸಿಂಗ್, ಈ ಬಾರಿ ಚೆನ್ನೈ ಜೆರ್ಸಿ ತೊಟ್ಟು ಆಡಲಿದ್ದಾರೆ. ರೋಹಿತ್ ಶರ್ಮಾ ಮುಂಬೈ ತಂಡವನ್ನು ಮುನ್ನಡೆಸುವ ಜತೆಗೆ ಬ್ಯಾಟಿಂಗ್‌'ನಲ್ಲೂ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅವರಿಗೆ ಇಶಾನ್ ಕಿಶನ್, ಎವಿನ್ ಲೀವಿಸ್, ಪೊಲ್ಲಾರ್ಡ್, ಸೂರ್ಯಕುಮಾರ್, ಸಿದ್ಧೇಶ್ ಲಾಡ್‌ರಿಂದ ಬೆಂಬಲ ದೊರೆಯಲಿದೆ. ಪಾಂಡ್ಯ ಸಹೋದರರು (ಹಾರ್ದಿಕ್, ಕೃನಾಲ್) ಪ್ರಮುಖ ಪಾತ್ರ ವಹಿಸಬೇಕಿದೆ. ಹರ್ಭಜನ್ ಮಾತ್ರವಲ್ಲದೇ ಮುಂಬೈಗೆ ಮಾಲಿಂಗ ಸೇವೆಯೂ ಲಭ್ಯವಿಲ್ಲ. ಹೀಗಾಗಿ ಬುಮ್ರಾ ಮೇಲೆ ಒತ್ತಡ ಹೆಚ್ಚಿದೆ. ಅವರಿಗೆ ಮುಸ್ತಫಿಜುರ್ ಹಾಗೂ ಪ್ಯಾಟ್ ಕಮಿನ್ಸ್‌ರಿಂದ ಬೆಂಬಲದ ಅಗತ್ಯವಿದೆ. ಅನನುಭವಿ ಸ್ಪಿನ್ನರ್‌ಗಳು ಮುಂಬೈ ದೌರ್ಬಲ್ಯ.

ಸಿಎಸ್‌ಕೆಗೆ ತಾರಾ ಬಲ: ಮತ್ತೊಂದೆಡೆ ಧೋನಿ ಜತೆ ರೈನಾ, ಜಡೇಜಾ, ಬ್ರಾವೋ, ವಾಟ್ಸನ್, ಡುಪ್ಲೆಸಿ, ಮುರಳಿ ವಿಜಯ್, ರಾಯುಡುರಂತಹ ತಾರಾ ಆಟಗಾರರ ಬಲ ಚೆನ್ನೈಗಿದೆ. ಉಪಯುಕ್ತ ಆಲ್ರೌಂಡರ್ ಕೇದಾರ್ ಜಾಧವ್, ಮುಂಬೈ ವೇಗಿ ಶಾರ್ದೂಲ್ ಠಾಕೂರ್ ವಾಂಖೆಡೆ ಪಿಚ್‌ಗೆ ಹೇಳಿ ಮಾಡಿಸಿದ ಬೌಲರ್‌ಗಳಾಗಿದ್ದಾರೆ.

ಸ್ಥಳ: ಮುಂಬೈ

ಸಮಯ: ಸಂಜೆ.08ಕ್ಕೆ

Follow Us:
Download App:
  • android
  • ios