Asianet Suvarna News Asianet Suvarna News

5 ವರ್ಷಗಳ ಬಳಿಕ ತವರಿನಲ್ಲಿಂದು ರಾಯಲ್ಸ್; ಇಂದು ಸೋತವರ ನಡುವಿನ ಕದನ

5 ವರ್ಷಗಳ ಬಳಿಕ ತಂಡ ತವರು ಅಭಿಮಾನಿಗಳ ಮುಂದೆ ಕಣಕ್ಕಿಳಿಯಲಿದೆ. ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ದಲ್ಲಿ ತಂಡ 2 ವರ್ಷ ನಿಷೇಧಕ್ಕೆ ಗುರಿಯಾಗಿತ್ತು. ಅದಕ್ಕೂ ಮುನ್ನ ರಾಜಸ್ಥಾನ ಕ್ರಿಕೆಟ್ ಸಮಿತಿಯನ್ನು ಆಳುತ್ತಿದ್ದ ಲಲಿತ್ ಮೋದಿ ಹಾಗೂ ಬಿಸಿಸಿಐ ನಡು ವಿನ ತಿಕ್ಕಾಟದಿಂದಾಗಿ ಜೈಪುರದಲ್ಲಿ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರಾಕರಿಸಿತ್ತು.

IPL 2018 Delhi Daredevils Rajasthan Royals look to get back to winning ways after faulty starts

ಐಪಿಎಲ್ 11ನೇ ಆವೃತ್ತಿಯಲ್ಲಿ ಕಳಪೆ ಆರಂಭ ಪಡೆದುಕೊಂಡ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಕ್ಷಣ ಎಚ್ಚೆತ್ತುಕೊಳ್ಳಲು ಕಾತರಿಸುತ್ತಿವೆ. ಇಂದು ಇಲ್ಲಿನ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಸೆಣಸಲಿದ್ದು, ಗೆಲುವಿನ ಹಳಿಗಿಳಿಯಲು ಹೋರಾಡಲಿವೆ. ರಾಜಸ್ಥಾನ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದಾಗಿದೆ.

5 ವರ್ಷಗಳ ಬಳಿಕ ತಂಡ ತವರು ಅಭಿಮಾನಿಗಳ ಮುಂದೆ ಕಣಕ್ಕಿಳಿಯಲಿದೆ. ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ದಲ್ಲಿ ತಂಡ 2 ವರ್ಷ ನಿಷೇಧಕ್ಕೆ ಗುರಿಯಾಗಿತ್ತು. ಅದಕ್ಕೂ ಮುನ್ನ ರಾಜಸ್ಥಾನ ಕ್ರಿಕೆಟ್ ಸಮಿತಿಯನ್ನು ಆಳುತ್ತಿದ್ದ ಲಲಿತ್ ಮೋದಿ ಹಾಗೂ ಬಿಸಿಸಿಐ ನಡು ವಿನ ತಿಕ್ಕಾಟದಿಂದಾಗಿ ಜೈಪುರದಲ್ಲಿ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರಾಕರಿಸಿತ್ತು.

ಸನ್‌ರೈಸರ್ಸ್‌ ವಿರುದ್ಧ ಸೋಮವಾರದ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಕುಸಿದು ಅವಮಾನಕ್ಕೊಳಗಾಗಿದ್ದ ರಾಯಲ್ಸ್ ಮತ್ತೊಮ್ಮೆ ತನ್ನ ತಾರಾ ಆಟಗಾರರ ಮೇಲೆ ಅವಲಂಬಿತಗೊಂಡಿದೆ. ನಾಯಕ ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್, ಆಸ್ಟ್ರೇಲಿಯಾದ ಡಾರ್ಚಿ ಶಾರ್ಟ್, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಮೇಲೆ ಭಾರೀ ಒತ್ತಡವಿದೆ.

11.5 ಕೋಟಿ ಜೇಬಿಗಿಳಿಸಿ ನಿರೀಕ್ಷೆಯ ಭಾರ ಹೊತ್ತುಕೊಂಡೇ ಕಣಕ್ಕಿಳಿದಿರುವ ಜೈದೇವ್ ಉನಾದ್ಕತ್, ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದರು. ಸೌರಾಷ್ಟ್ರದ ಎಡಗೈ ವೇಗಿ ತಮ್ಮ ಮೇಲೆ ಮಾಲೀಕರು

ಹಾಕಿರುವ ಬಂಡವಾಳವನ್ನು ಸಮರ್ಥಿಸಿಕೊಳ್ಳುವಂತಹ ಆಟವಾಡಬೇಕಿದೆ. ಕರ್ನಾಟಕದ ಕೆ.ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.

ಮತ್ತೊಂದೆಡೆ ರಾಹುಲ್ ಅಬ್ಬರಕ್ಕೆ ತಬ್ಬಿಬ್ಬಾಗಿದ್ದ ಡೆಲ್ಲಿ , ಆತ್ಮವಿಶ್ವಾಸ ಮರಳಿ ಪಡೆಯಲು ಹಾತೊರೆಯುತ್ತಿದೆ. ನಾಯಕ ಗಂಭೀರ್ ಬ್ಯಾಟಿಂಗ್‌'ನಲ್ಲಿ ಮಿಂಚಿದ್ದರಾದರೂ ನಾಯಕತ್ವದಲ್ಲಿ ಎಡವಿದ್ದರು. ಹೀಗಾಗಿ ಅವರಿಗೆ ಈ ಪಂದ್ಯ ಅತ್ಯಂತ ಮಹತ್ವದೆನಿಸಿದೆ. ಡೆಲ್ಲಿ ತಂಡ ಅತ್ಯುತ್ತಮ ಆಟಗಾರರಿಂದ ಕೂಡಿದ್ದು ರಾಯಲ್ಸ್‌'ಗಿಂತ ಪ್ರಬಲವಾಗಿ ತೋರುತ್ತಿದೆ. ಮ್ಯಾಕ್ಸ್‌'ವೆಲ್ ತಂಡ ಕೂಡಿಕೊಂಡಿದ್ದು, ಬಲ ಹೆಚ್ಚಿಸಿದೆ.

Follow Us:
Download App:
  • android
  • ios