11ನೇ ಆವೃತ್ತಿಯ ಐಪಿಎಲ್’ನಲ್ಲಿ 2 ವರ್ಷಗಳ ನಿಷೇಧದ ಬಳಿಕ ಕಮ್’ಬ್ಯಾಕ್ ಮಾಡಿದ್ದ ಎಂ.ಎಸ್. ಧೋನಿ ನೇತೃತ್ವದ ಸಿಎಸ್’ಕೆ ಚಾಂಪಿಯನ್ ಪಟ್ಟಕ್ಕೇರಿತ್ತು. ಇದು ಸಿಎಸ್’ಕೆ ತಂಡದ ಮೂರನೇ ಐಪಿಎಲ್ ಪ್ರಶಸ್ತಿಯಾಗಿದೆ.

ಬೆಂಗಳೂರು[ಜೂ.17]: ಐಪಿಎಲ್ 2018ರ ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯ ಪ್ರಕಟಗೊಂಡಿದ್ದು, ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಸ್ಥಾನದಲ್ಲಿದೆ. ಅಧಿಕೃತ ಸಮೀಕ್ಷೆಯ ಪ್ರಕಾರ ತಂಡದ ಬ್ರ್ಯಾಂಡ್ ಮೌಲ್ಯ ₹445 ಕೋಟಿ ಎಂದು ಸ್ವತಃ ಚೆನ್ನೈ ತಂಡ ಟ್ವೀಟರ್‌'ನಲ್ಲಿ ಬಹಿರಂಗಗೊಳಿಸಿದೆ. 

ಪಟ್ಟಿಯಲ್ಲಿ ಶಾರುಖ್ ಖಾನ್ ಸಹ ಮಾಲೀಕತ್ವದ ಕೋಲ್ಕತಾ 2ನೇ ಸ್ಥಾನ ಪಡೆದರೆ, ಸನ್‌ರೈಸರ್ಸ್‌ 3ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ 4ನೇ ಸ್ಥಾನ ಪಡೆದಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು 5ನೇ ಸ್ಥಾನ ಪಡೆದಿದೆ. ಆರ್’ಸಿಬಿ ತಂಡದ ಬ್ರ್ಯಾಂಡ್ ಮೌಲ್ಯ ₹335 ಕೋಟಿ ಎನ್ನಲಾಗಿದೆ. ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಕೊನೆ ಸ್ಥಾನದಲ್ಲಿದೆ.

Scroll to load tweet…

11ನೇ ಆವೃತ್ತಿಯ ಐಪಿಎಲ್’ನಲ್ಲಿ 2 ವರ್ಷಗಳ ನಿಷೇಧದ ಬಳಿಕ ಕಮ್’ಬ್ಯಾಕ್ ಮಾಡಿದ್ದ ಎಂ.ಎಸ್. ಧೋನಿ ನೇತೃತ್ವದ ಸಿಎಸ್’ಕೆ ಚಾಂಪಿಯನ್ ಪಟ್ಟಕ್ಕೇರಿತ್ತು. ಇದು ಸಿಎಸ್’ಕೆ ತಂಡದ ಮೂರನೇ ಐಪಿಎಲ್ ಪ್ರಶಸ್ತಿಯಾಗಿದೆ.