ಹೈದರಾಬಾದ್[ಏ.21] ಸತತ 4 ಸೋಲು ಕಂಡು ಪ್ಲೇ-ಆಫ್‌ ರೇಸ್‌ನಿಂದ ಹೊರಬೀಳುವ ಆತಂಕದಲ್ಲಿರುವ ಕೋಲ್ಕತಾ ನೈಟ್‌ರೈಡ​ರ್ಸ್, ಭಾನುವಾರ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೆಣಸಲಿದೆ. 

ಹ್ಯಾಟ್ರಿಕ್‌ ಸೋಲಿನ ಬಳಿಕ ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಗೆದ್ದ ಸನ್‌ರೈಸರ್ಸ್, ಆತ್ಮವಿಶ್ವಾಸ ಮರಳಿ ಪಡೆದಿದೆ. ಎರಡೂ ತಂಡಗಳಲ್ಲಿ ರಸೆಲ್‌, ರಾಣಾ, ಲಿನ್‌, ವಾರ್ನರ್‌, ಬೇರ್‌ಸ್ಟೋವ್‌ರಂತಹ ಬಿಗ್‌ ಹಿಟ್ಟರ್‌ಗಳು ಒಂದೇ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಪಿಚ್‌ ರಿಪೋರ್ಟ್‌

ಹೈದರಾಬಾದ್‌ ಪಿಚ್‌ ಮೊದಲೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಿತ್ತು. ಆದರೆ ಕಳೆದ 3 ಪಂದ್ಯಗಳಲ್ಲಿ ಸಾಧಾರಣ ಮೊತ್ತ ದಾಖಲಾಗಿದೆ. ಇಲ್ಲಿ ಮೊದಲು ಬ್ಯಾಟ್‌ ಮಾಡಿ 160-170 ರನ್‌ ಗಳಿಸುವುದು ಸುರಕ್ಷಿತ ಎನಿಸಿದೆ. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ.