ಬೆಂಗಳೂರು[ಮೇ.09]: ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ನಿರ್ಣಾಯಕ ಘಟ್ಟದಂತ ಸಮೀಪಿಸಿದೆ. 12ನೇ ಆವೃತ್ತಿಯ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ ಫೈನಲ್ ಪ್ರವೇಶಿಸಿದೆ.

ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ತಂಡಗಳು ಶುಕ್ರವಾರ[ಮೇ.10]ರಂದು ಮುಖಾಮುಖಿಯಾಗುತ್ತಿದ್ದು, ವಿಜೇತ ತಂಡ ಫೈನಲ್ ಪ್ರವೇಶಿಸಲಿದೆ.
ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ತೋರಿರುವ ಶೇನ್ ವಾಟ್ಸನ್ ಅವರನ್ನು ಧೋನಿ ತಂಡದಿಂದ ಹೊರಗಿಡುವ ಸಾಧ್ಯತೆಯಿದೆ. ರೈನಾ, ಡುಪ್ಲೆಸಿಸ್, ಧೋನಿ ತಂಡದ ಬ್ಯಾಟಿಂಗ್ ಬೆನ್ನೆಲಬು ಆಗಿದ್ದರೆ, ಬೌಲಿಂಗ್’ನಲ್ಲಿ ದೀಪಕ್ ಚಾಹರ್, ಹರ್ಭಜನ್ ಸಿಂಗ್ ಹಾಗೂ  ಇಮ್ರಾನ್ ತಾಹಿರ್ ಅಗತ್ಯ ಸಂದರ್ಭದಲ್ಲಿ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ.

ಇನ್ನು ಪ್ರತಿಭಾನ್ವಿತ ಆಟಗಾರರ ದಂಡನ್ನೇ ಹೊಂದಿರುವ ಡೆಲ್ಲಿ ಪಡೆಗೆ ಪೃಥ್ವಿ ಶಾ ಫಾರ್ಮ್’ಗೆ ಮರಳಿರುವುದು ಪ್ಲಸ್ ಪಾಯಿಂಟ್ ಆದರೆ, ಶಿಖರ್ ಧವನ್, ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್’ನಲ್ಲಿ ಅಬ್ಬರಿಸಿದರೆ ಬೃಹತ್ ಮೊತ್ತ ಕಲೆಹಾಕುವುದು ಡೆಲ್ಲಿಗೆ ಕಷ್ಟವೇನಲ್ಲ. ಇನ್ನು ಬೌಲಿಂಗ್’ನಲ್ಲಿ ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಕೀಮೋ ಪೌಲ್ ಉತ್ತಮ ಫಾರ್ಮ್’ನಲ್ಲಿದ್ದು ಟ್ರೆಂಟ್ ಬೌಲ್ಟ್ ಲಯ ಕಂಡುಕೊಂಡರೆ ಧೋನಿ ಪಡೆಗೆ ಗೆಲುವು ಮರೀಚಿಕೆಯಾಗಬಹುದು. 

ಕೆಲವು ಅಂಕಿ-ಅಂಶಗಳು

ಉಭಯ ತಂಡಗಳ ಒಟ್ಟು ಮುಖಾಮುಖಿ: 20
CSK: 14 ಗೆಲುವು
DC: 06 ಗೆಲುವು

ವಿಶಾಖಪಟ್ಟಣದ ಪಿಚ್ ಮಾಹಿತಿ:
ಸರಾಸರಿ ಮೊತ್ತ: 156 ರನ್[ಮೊದಲ ಬ್ಯಾಟಿಂಗ್]
148 ರನ್[ಸರಾಸರಿ ಚೇಸಿಂಗ್ ವೇಳೆ]
ಮೊದಲ ಬ್ಯಾಟಿಂಗ್ ಮಾಡಿದಾಗ: 22 ಗೆಲುವು
ಚೇಸಿಂಗ್ ಮಾಡಿದಾಗ: 34 ಗೆಲುವು

ಕೀ ಆಟಗಾರರು:
ಡೆಲ್ಲಿ ಕ್ಯಾಪಿಟಲ್ಸ್:
ಶಿಖರ್ ಧವನ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಮಿತ್ ಮಿಶ್ರಾ

ಚೆನ್ನೈ ಸೂಪರ್’ಕಿಂಗ್ಸ್:
ಸುರೇಶ್ ರೈನಾ, ಫಾಫ್ ಡುಪ್ಲೆಸಿಸ್, ಎಂ.ಎಸ್ ಧೋನಿ, ಇಮ್ರಾನ್ ತಾಹಿರ್.

ಸಂಭಾವ್ಯ ತಂಡ:

ಚೆನ್ನೈ ಸೂಪರ್’ಕಿಂಗ್ಸ್: ಶೇನ್ ವಾಟ್ಸನ್, ಫಾಫ್ ಡುಪ್ಲೆಸಿಸ್, ಸುರೇಶ್ ರೈನಾ, ಮುರುಳಿ ವಿಜಯ್, ಅಂಬಟಿ ರಾಯುಡು, ಎಂ.ಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ದೀಪಕ್ ಚಾಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕಾಲಿನ್ ಮನ್ರೋ, ಶೆರ್ಫಾನೆ ರುದರ್’ಫೋರ್ಡ್, ಅಕ್ಷರ್ ಪಟೇಲ್, ಕೀಮೋ ಪೌಲ್, ಟ್ರೆಂಟ್ ಬೌಲ್ಟ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ.