2016ರ ರಿಯೋ ಒಲಿಂಪಿಕ್ಸ್ ವೇಳೆ ಕಾರ್ಲೋಸ್ ಭ್ರಷ್ಟಾಚಾರ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಲಾಸನ್ನೆ(ಅ.08): ಭ್ರಷ್ಟಾಚಾರ ಆರೋಪದ ಮೇಲೆ ಬಂಧಿತರಾಗಿರುವ ಬ್ರೆಜಿಲ್ ದೇಶದ ಒಲಿಂಪಿಕ್ ಸಮಿತಿ ಅಧ್ಯಕ್ಷ ಕಾರ್ಲೋಸ್ ನುಜ್ಮಾನ್ ಅವರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಮಾನತು ಮಾಡಿದೆ.

2016ರ ರಿಯೋ ಒಲಿಂಪಿಕ್ಸ್ ವೇಳೆ ಕಾರ್ಲೋಸ್ ಭ್ರಷ್ಟಾಚಾರ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಇದೇ ವೇಳೆ ಐಒಸಿಯಲ್ಲಿನ ನುಜ್ಮಾನ್'ರ ಗೌರವಾನ್ವಿತ ಸದಸ್ಯತ್ವವನ್ನೂ ವಜಾಗೊಳಿಸಲಾಗಿದ್ದು, 2020ರ ಟೊಕಿಯೋ ಒಲಿಂಪಿಕ್ಸ್‌'ನ ಸಮನ್ವಯ ಸಮಿತಿಯಿಂದಲೂ ಅವರನ್ನು ಕೈ ಬಿಡಲಾಗಿದೆ.