ಸಾಮಾಜಿಕ ಜಾಲತಾಣದ ದಿಗ್ಗಜನಾದ ಟ್ವಿಟರ್, ನವೆಂಬರ್ 9ರಂದು 140 ಅಕ್ಷರಗಳ ಮಿತಿಗೆ ಗುಡ್ ಬೈ ಹೇಳಿ ಹೊಸದಾಗಿ 280 ಅಕ್ಷರ ಬಳಸಲು ತನ್ನ ಬಳಕೆದಾರರಿಗೆ ಅವಕಾಶ ನೀಡಿದೆ. ಅದೇ ರೀತಿ ಬಳಕೆದಾರರ ಹೆಸರಿನ ಮಿತಿ 20ರಿಂದ 50 ಅಕ್ಷರಗಳಿಗೆ ಹೆಚ್ಚಿಸಿದೆ.

ದುಬೈ(ನ.12): ಟ್ವೀಟರ್‌ನಲ್ಲಿ 140 ಅಕ್ಷರಗಳ ಮಿತಿಯನ್ನು 280ಕ್ಕೇರಿಸಿದ ಸಂತಸವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ವಿಭಿನ್ನವಾಗಿ ಆಚರಿಸಿದೆ.

ಅಕ್ಷರಗಳ ಮಿತಿಯನ್ನು ಏರಿಸಿದ್ದಕ್ಕೆ ಟ್ವೀಟರ್‌'ಗೆ ಧನ್ಯವಾದ ಹೇಳಿರುವ ಐಸಿಸಿ, ಶ್ರೀಲಂಕಾ ಕ್ರಿಕೆಟಿಗರ ಪೂರ್ಣ ಹೆಸರನ್ನು ಟ್ವೀಟ್ ಮಾಡಿದೆ. ಲಂಕಾದ ಮಾಜಿ ಕ್ರಿಕೆಟಿಗರಾದ ಚಾಮಿಂಡ ವಾಸ್, ಕುಮಾರ ಧರ್ಮಸೇನಾ, ಹಾಲಿ ಆಟಗಾರರಾದ ನಿರೋಶನ್ ಡಿಕ್'ವೆಲ್ಲಾ ಹಾಗೂ ರಂಗನಾ ಹೆರಾತ್ ಅವರ ಪೂರ್ಣ ಹೆಸರನ್ನು ಟ್ವೀಟ್ ಮಾಡಿದೆ.

Scroll to load tweet…

ಉದಾಹರಣೆಗೆ (ವರ್ನಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂಡ ವಾಸ್, ಹೆರಾತ್ ಮುದಿಯನಸೆಲಗೆ ರಂಗನಾ ಕೀರ್ತಿ ಭಂಡಾರ ಹೆರಾತ್), ಹೀಗೆ ಸಂಪೂರ್ಣ ಹೆಸರನ್ನು ಟೈಪಿಸುವುದರೊಂದಿಗೆ ಎಲ್ಲರ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣದ ದಿಗ್ಗಜನಾದ ಟ್ವಿಟರ್, ನವೆಂಬರ್ 9ರಂದು 140 ಅಕ್ಷರಗಳ ಮಿತಿಗೆ ಗುಡ್ ಬೈ ಹೇಳಿ ಹೊಸದಾಗಿ 280 ಅಕ್ಷರ ಬಳಸಲು ತನ್ನ ಬಳಕೆದಾರರಿಗೆ ಅವಕಾಶ ನೀಡಿದೆ. ಅದೇ ರೀತಿ ಬಳಕೆದಾರರ ಹೆಸರಿನ ಮಿತಿ 20ರಿಂದ 50 ಅಕ್ಷರಗಳಿಗೆ ಹೆಚ್ಚಿಸಿದೆ.