2016ರ ಟೆಸ್ಟ್ಗಳಲ್ಲಿ ಗರಿಷ್ಠ ರನ್ಗಳ ರೇಸ್ನಲ್ಲಿರುವ ಕೊಹ್ಲಿಗೆ ಐಸಿಸಿ ಯಾವುದೆ ಪ್ರಶಸ್ತಿ ನೀಡದಿರುವುದು ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ಆಗಿದೆ. 17 ಟೆಸ್ಟ್ಗಳಲ್ಲಿ 3 ದ್ವಿಶತಕ ಸಿಡಿಸಿದ್ದಲ್ಲದೇ 1215ರನ್ ಗಳಿಸಿದ ಕೊಹ್ಲಿಗೆ ಯಾವುದೇ ಪ್ರಶಸ್ತಿ ಸಿಗದಿರುವುದು ಕೊಹ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಬೆಂಗಳೂರು (ಡಿ.23): 2016ರ ಟೆಸ್ಟ್ಗಳಲ್ಲಿ ಗರಿಷ್ಠ ರನ್ಗಳ ರೇಸ್ನಲ್ಲಿರುವ ಕೊಹ್ಲಿಗೆ ಐಸಿಸಿ ಯಾವುದೆ ಪ್ರಶಸ್ತಿ ನೀಡದಿರುವುದು ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ಆಗಿದೆ. 17 ಟೆಸ್ಟ್ಗಳಲ್ಲಿ 3 ದ್ವಿಶತಕ ಸಿಡಿಸಿದ್ದಲ್ಲದೇ 1215ರನ್ ಗಳಿಸಿದ ಕೊಹ್ಲಿಗೆ ಯಾವುದೇ ಪ್ರಶಸ್ತಿ ಸಿಗದಿರುವುದು ಕೊಹ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
2016ರ ಐಸಿಸಿ ಟೆಸ್ಟ್ ತಂಡದಲ್ಲಿ ಅಶ್ವಿನ್ ಹೊರತುಪಡಿಸಿದರೆ ಯಾವುದೇ ಭಾರತೀಯ ಆಟಗಾರನೂ ತಂಡದಲ್ಲಿ ಸ್ಥಾನ ಪಡೆದಿಲ್ಲ. ವರ್ಷವಿಡೀ ಅದ್ಭತ ಪ್ರದರ್ಶನ ನೀಡಿ ಹಲವು ದಾಖಲೆಗಳನ್ನ ಸೃಷ್ಟಿಸಿದ ವಿರಾಟ್ ಕೊಹ್ಲಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಆದರೆ ಭಾರತದ ವಿರುದ್ಧ ಹೀನಾಯವಾಗಿ ಸೋತಿದ್ದ ಇಂಗ್ಲೆಂಡ್ ನಾಯಕ ಅಲಾಸ್ಟೈರ್ ಕುಕ್ ಐಸಿಸಿ ಟೆಸ್ಟ್ ತಂಡದ ನಾಯಕನಾಗಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಗೂ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಟ್ಟು ಕೊಹ್ಲಿಗೆ ಅವಮಾನ ಮಾಡಿದ್ದಾರೆ ಎಂದು ಕೂಡ ಕ್ರಿಕೆಟ್ ಪಂಡಿತರು ಅಭಿಪ್ರಯಿಸಿದ್ದಾರೆ.
