ಆರಂಭಿಕ ಬ್ಯಾಟ್ಸ್'ಮೆನ್'ಗಳಾದ ಲೆವಿಸ್ ಹಾಗೂ ಹೋಪ್ ನಿಧಾನಗತಿಯಲ್ಲಿ ಆಟ ಆರಂಭಿಸಿದರು. ಇಬ್ಬರ ಜೋಡಿ ಜೊತೆಯಾಗುತ್ತಿದೆ ಎನ್ನುವಾಗ ಹಾರ್ದಿಕ್ ಪಾಂಡ್ಯ ತಂಡದ ಮೊತ್ತ 57 ರನ್ ಆಗಿದ್ದಾಗ ಹೋಪ್(35: 63 ಎಸೆತ, 4 ಬೌಂಡರಿ)ರನ್ನು ಪೆವಿಲಿಯನ್'ಗೆ ಕಳುಹಿಸಿದರು. ಇದಾದ ಕೆಲವೇ ಓವರ್'ಗಳಲ್ಲಿ ಲೇವಿಸ್(35:60 ಎಸೆತ,2 ಬೌಂಡರಿ, 2 ಸಿಕ್ಸ್'ರ್) ಅವರನ್ನು ಕುಲ್'ದೀಪ್ ಯಾದವ್ ಔಟ್ ಮಾಡಿದರು.
ಆಂಟಿಗುವಾ(ಜು.02): ಉಮೇಶ್ ಯಾದವ್, ಹರ್ದಿಕ್ ಪಾಂಡ್ಯ ಹಾಗೂ ಕುಲ್'ದೀಪ್ ಯಾದವ್ ಅವರ ಮಾರಕ ಬೌಲಿಂಗ್ ದಾಳಿಗೆ ಕುಸಿದ ವಿಂಡೀಸ್ ತಂಡ ಭಾರತಕ್ಕೆ 190 ರನ್'ಗಳ ಟಾರ್ಗೆಟ್ ನೀಡಿದೆ.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಐದು ಏಕದಿನ ಪಂದ್ಯಗಳ ಸರಣಿಯ ನಾಲ್ಕನೆ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಹೋಲ್ಡರ್ ನೇತೃತ್ವದ ಕೆರೆಬಿಯನ್ ಪಡೆ ಟೀಂ ಇಂಡಿಯಾ ಬೌಲರ್'ಗಳ ದಾಳಿಯೆದುರು 50 ಓವರ್'ಗಳಲ್ಲಿ 189/9 ರನ್'ಗಳ ಸಾಧಾರಣ ಮೊತ್ತ ಗಳಿಸಿದೆ.
ಆರಂಭಿಕ ಬ್ಯಾಟ್ಸ್'ಮೆನ್'ಗಳಾದ ಲೆವಿಸ್ ಹಾಗೂ ಹೋಪ್ ನಿಧಾನಗತಿಯಲ್ಲಿ ಆಟ ಆರಂಭಿಸಿದರು. ಇಬ್ಬರ ಜೋಡಿ ಜೊತೆಯಾಗುತ್ತಿದೆ ಎನ್ನುವಾಗ ಹಾರ್ದಿಕ್ ಪಾಂಡ್ಯ ತಂಡದ ಮೊತ್ತ 57 ರನ್ ಆಗಿದ್ದಾಗ ಹೋಪ್(35: 63 ಎಸೆತ, 4 ಬೌಂಡರಿ)ರನ್ನು ಪೆವಿಲಿಯನ್'ಗೆ ಕಳುಹಿಸಿದರು. ಇದಾದ ಕೆಲವೇ ಓವರ್'ಗಳಲ್ಲಿ ಲೇವಿಸ್(35:60 ಎಸೆತ,2 ಬೌಂಡರಿ, 2 ಸಿಕ್ಸ್'ರ್) ಅವರನ್ನು ಕುಲ್'ದೀಪ್ ಯಾದವ್ ಔಟ್ ಮಾಡಿದರು.
ನಂತರ ವಿಕೇಟ್ ಕೀಪರ್ ಷೇಯ್ ಹೋಪ್(25), ಚೇಸ್ (24) ಹಾಗೂ ಮೊಹಮದ್(20) ಕೇವಲ 20ರ ಗಡಿ ದಾಟಿದರು. ನಾಯಕ ಹೋಲ್ಡ್'ರ್(11) ಕೂಡ ಹೆಚ್ಚು ಹೊತ್ತು ಕ್ರೀಸ್'ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ವೆಂಡೀಸ್ ತಂಡ 50 ಓವರ್'ಗಳಲ್ಲಿ 189/9 ರನ್ ಗಳಿಸಿತು. ಭಾರತದ ಪರ ಉಮೇಶ್ ಯಾದವ್ 3/36,ಹಾರ್ದಿಕ್ ಪಾಂಡ್ಯ3/40 ಹಾಗೂಕುಲ್'ದೀಪ್ ಯಾದವ್ 2/31 ಯಶಸ್ವಿ ಬೌಲರ್ ಎನಿಸಿದರು.
ಸಂಕ್ಷಿಪ್ತ ಸ್ಕೋರ್
ವಿಂಡೀಸ್ 50 ಓವರ್'ಗಳಲ್ಲಿ 189/9
(ಲೇವೀಸ್:35,ಹೋಪ್:35, ಷೇಯ್ ಹೋಪ್:25)
ಬೌಲಿಂಗ್: (ಉಮೇಶ್ ಯಾದವ್ 3/36,ಹಾರ್ದಿಕ್ ಪಾಂಡ್ಯ3/40 ಕುಲ್'ದೀಪ್ ಯಾದವ್ 2/31)