Asianet Suvarna News Asianet Suvarna News

ಐಪಿಎಲ್'ನಿಂದ ಸಿಕ್ಸ್'ರ್ ಬ್ಯಾಟ್ಸ್'ಮೆನ್ ಔಟ್

ನ್ಯೂಜಿಲೆಂಡ್ ಮಾಜಿ ನಾಯಕ 3ರಿಂದ 4 ವಾರಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಆವೃತ್ತಿಯಲ್ಲಿ 11 ಪಂದ್ಯಗಳನ್ನಾಡಿದ ಮೆಕ್ಕಲಂ 2 ಅರ್ಧಶತಕಗಳೊಂದಿಗೆ 319 ರನ್ ಕಲೆಹಾಕಿದ್ದಾರೆ.

Injured McCullum out for remainder of IPL
  • Facebook
  • Twitter
  • Whatsapp

ನವದೆಹಲಿ(ಮೇ.06): ಗುಜರಾತ್ ಲಯನ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಕಲಂ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು ಪ್ರಸಕ್ತ ಐಪಿಎಲ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಗುರುವಾರ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಅವರು ಗಾಯಗೊಂಡಿದ್ದಾಗಿ ಐಪಿಎಲ್ ಪ್ರಕಟಣೆ ತಿಳಿಸಿದೆ.

ನ್ಯೂಜಿಲೆಂಡ್ ಮಾಜಿ ನಾಯಕ 3ರಿಂದ 4 ವಾರಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಆವೃತ್ತಿಯಲ್ಲಿ 11 ಪಂದ್ಯಗಳನ್ನಾಡಿದ ಮೆಕ್ಕಲಂ 2 ಅರ್ಧಶತಕಗಳೊಂದಿಗೆ 319 ರನ್ ಕಲೆಹಾಕಿದ್ದಾರೆ.

ಇದೇ ವೇಳೆ ತಂಡದ ವೇಗದ ಬೌಲರ್ ನಾಥು ಸಿಂಗ್ ಸಹ ಗಾಯದ ಸಮಸ್ಯೆಯಿಂದಾಗಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ರಾಜ್‌ಕೋಟ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದ ವೇಳೆ ಬೆನ್ನು ನೋವಿಗೆ ತುತ್ತಾದ ಅವರು, ಆನಂತರ ಯಾವುದೇ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಈ ಆವೃತ್ತಿಯಲ್ಲಿ ನಾಥು ಸಿಂಗ್ ಕೇವಲ 2 ಪಂದ್ಯಗಳನ್ನಷ್ಟೇ ಆಡಿದರು.

Follow Us:
Download App:
  • android
  • ios