ಪುರುಷರ 69 ಕೆ.ಜಿ ವಿಭಾಗದ ವೇಯ್ಟ್'ಲಿಫ್ಟಿಂಗ್'ನಲ್ಲಿ 18 ವರ್ಷದ ದೀಪಕ್ ಲಾಥರ್ 295 ಕೆ.ಜಿ ಬಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಗೋಲ್ಡ್'ಕೋಸ್ಟ್(ಏ.06): ಕಾಮನ್'ವೆಲ್ತ್ ಗೇಮ್ಸ್'ನಲ್ಲಿ ಭಾರತ ಎರಡನೇ ದಿನವೂ ಪದಕದ ಬೇಟೆ ಮುಂದುವರೆಸಿದೆ. ಮೀರಾಬಾಯಿ ಚಾನು ಹಾಗೂ ಗುರುರಾಜ್ ಬಳಿಕ ಮಹಿಳೆಯರ 53 ಕೆ.ಜಿ ವಿಭಾಗದ ವೇಯ್ಟ್'ಲಿಫ್ಟಿಂಗ್'ನಲ್ಲಿ ಸಂಜಿತಾ ಚಾನು ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತ ವೇಯ್ಟ್'ಲಿಫ್ಟಿಂಗ್'ನಲ್ಲಿ ಹ್ಯಾಟ್ರಿಕ್ ಬಾರಿಸಿದಂತಾಗಿದೆ.
ಮಹಿಳೆಯರ 53 ಕೆ.ಜಿ ವೇಯ್ಟ್'ಲಿಫ್ಟಿಂಗ್'ನಲ್ಲಿ ಸಂಜಿತಾ ಚಾನು ಒಟ್ಟು 192 ಕೆ.ಜಿ ಬಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕಾಮನ್'ವೆಲ್ತ್ ಕೂಟ ದಾಖಲೆ 84 ಕೆ.ಜಿ ಸ್ನ್ಯಾಚ್ ಹಾಗೂ 108 ಕೆಜಿ ಕ್ಲೀನ್ ಎಂಡ್ ಜೆರ್ಕ್ ಎತ್ತುವ ಮೂಲಕ ಸಂಜಿತಾ ಚಾನು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಸಂಜಿತಾ ಸಾಧನೆಯನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಇನ್ನು ಪುರುಷರ 69 ಕೆ.ಜಿ ವಿಭಾಗದ ವೇಯ್ಟ್'ಲಿಫ್ಟಿಂಗ್'ನಲ್ಲಿ 18 ವರ್ಷದ ದೀಪಕ್ ಲಾಥರ್ 295 ಕೆ.ಜಿ ಬಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಭಾರತದ ಮಹಿಳೆಯರ ಹಾಕಿ ತಂಡವು ಮೊದಲ ಪಂದ್ಯದಲ್ಲಿ ವೇಲ್ಸ್ ಎದುರು ಮುಗ್ಗರಿಸಿತ್ತು. ಇಂದು ಮಲೇಷ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 4-1 ಅಂತರದಲ್ಲಿ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿದೆ.
