ಮಂಗಳವಾರವಷ್ಟೇ ನಾಯಕ ವಿರಾಟ್ ಕೊಹ್ಲಿ, ‘ನಮ್ಮ ಮೇಲೆ ನಂಬಿಕೆ ಕಳೆದುಕೊಳ್ಳಬೇಡಿ’ ಎಂದು ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಸಂದೇಶ ಬರೆದಿದ್ದರೂ, ತಂಡ ಮಾತ್ರ ನಂಬಿಕೆ ಉಳಿಸಿಕೊಳ್ಳಲು ಬೇಕಿರುವ ಕಾರ್ಯದಲ್ಲಿ ತೊಡಗಿಲ್ಲ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು ಭಾರತ, ಭಾನುವಾರ ಸೋತಿತ್ತು. ಸೋಲುಂಡು 3 ದಿನ ಕಳೆದರೂ, ತಂಡದ ಆಟಗಾರರು ಒಮ್ಮೆಯೂ ನೆಟ್ಸ್‌ಗಿಳಿದು ಅಭ್ಯಾಸ ನಡೆಸಿಲ್ಲ. ಲಂಡನ್‌ನ ಹೋಟೆಲ್‌ನಲ್ಲಿ ಬೆಚ್ಚಗೆ ಅಡಗಿದ್ದಾರೆ.

ನಾಟಿಂಗ್‌ಹ್ಯಾಮ್[ಆ.16]: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಸತತ 2 ಪಂದ್ಯಗಳಲ್ಲಿ ಸೋಲುಂಡ ಬಳಿಕ ಆಸಕ್ತಿ ಕಳೆದುಕೊಂಡಿತಾ? ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡಲು
ಶುರುವಾಗಿದೆ. 
ಮಂಗಳವಾರವಷ್ಟೇ ನಾಯಕ ವಿರಾಟ್ ಕೊಹ್ಲಿ, ‘ನಮ್ಮ ಮೇಲೆ ನಂಬಿಕೆ ಕಳೆದುಕೊಳ್ಳಬೇಡಿ’ ಎಂದು ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಸಂದೇಶ ಬರೆದಿದ್ದರೂ, ತಂಡ ಮಾತ್ರ ನಂಬಿಕೆ ಉಳಿಸಿಕೊಳ್ಳಲು ಬೇಕಿರುವ ಕಾರ್ಯದಲ್ಲಿ ತೊಡಗಿಲ್ಲ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು ಭಾರತ, ಭಾನುವಾರ ಸೋತಿತ್ತು. ಸೋಲುಂಡು 3 ದಿನ ಕಳೆದರೂ, ತಂಡದ ಆಟಗಾರರು ಒಮ್ಮೆಯೂ ನೆಟ್ಸ್‌ಗಿಳಿದು ಅಭ್ಯಾಸ ನಡೆಸಿಲ್ಲ. ಲಂಡನ್‌ನ ಹೋಟೆಲ್‌ನಲ್ಲಿ ಬೆಚ್ಚಗೆ ಅಡಗಿದ್ದಾರೆ.

ಭಾನುವಾರ ಪಂದ್ಯ ಮುಕ್ತಾಯಗೊಂಡ ಬಳಿಕ, ಭಾರತಕ್ಕೆ 2 ದಿನಗಳ ಸಮಯವಕಾಶವಿತ್ತು. ಸ್ಥಳೀಯ ಕ್ಲಬ್‌ಗಳು ಭಾರತೀಯರ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಲು ಹಿಂದೇಟು ಹಾಕುತ್ತಿರಲಿಲ್ಲ. ನೆಟ್ ಬೌಲರ್‌ಗಳನ್ನು ಹೊಂದಿಸಿಕೊಳ್ಳುವುದು ತಂಡಕ್ಕೆ ದೊಡ್ಡ ವಿಷಯವೇನಲ್ಲ. ಹೀಗಿದ್ದೂ ಯಾರೂ ಸಹ ಅಭ್ಯಾಸ ನಡೆಸಲು ಆಸಕ್ತಿ ತೋರಲಿಲ್ಲ. ಬುಧವಾರ ಲಂಡನ್‌ನಿಂದ ನಾಟಿಂಗ್'ಹ್ಯಾಮ್‌ಗೆ ಪ್ರಯಾಣ ಬೆಳೆಸಿದ ತಂಡ, ಅಭ್ಯಾಸಕ್ಕೆಂದು ಮೈದಾನಕ್ಕಿಳಿಯುವುದು ಗುರುವಾರ. ಶನಿವಾರದಿಂದ (ಆ.18) 3ನೇ ಟೆಸ್ಟ್ ಆರಂಭಗೊಳ್ಳಲಿದ್ದು, ಭಾರತ ತಂಡಕ್ಕೆ ಅಭ್ಯಾಸ ನಡೆಸಲು ಕೇವಲ 2 ಅವಧಿಗಳು ಮಾತ್ರ ಸಿಗಲಿವೆ.